Tuesday, June 18, 2024
Homeರಾಷ್ಟ್ರೀಯಹಿಜಾಬ್‌ ಧರಿಸಿ ಕಾಲೇಜಿಗೆ ಬರದಂತೆ ಸೂಚನೆ | ರಾಜೀನಾಮೆ ನೀಡಿದ ಪ್ರಾಧ್ಯಾಪಕಿ

ಹಿಜಾಬ್‌ ಧರಿಸಿ ಕಾಲೇಜಿಗೆ ಬರದಂತೆ ಸೂಚನೆ | ರಾಜೀನಾಮೆ ನೀಡಿದ ಪ್ರಾಧ್ಯಾಪಕಿ

ಕೊಲ್ಕತ್ತಾ: ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬರುವ ವಿಚಾರದಲ್ಲಿ ಕರ್ನಾಟಕದಲ್ಲಿ ಭಾರೀ ವಿವಾದಗಳಾಗಿದ್ದವು. ಈಗ ಕೊಲ್ಕತ್ತಾದಲ್ಲಿ ಶಿಕ್ಷಕಿಯೊಬ್ಬರು ಹಿಜಾಬ್‌ ಧರಿಸಿ ಕಾಲೇಜಿಗೆ ಬರುವ ವಿಚಾರವಾಗಿ ವಿವಾದ ಸೃಷ್ಟಿಯಾಗಿದೆ. ಹಿಜಾಬ್‌ ಧರಿಸಿ ಕಾಲೇಜಿಗೆ ಬರದಂತೆ ಸಂಸ್ಥೆಯ ಅಧಿಕಾರಿಗಳು ತಮಗೆ ತಾಕೀತು ಮಾಡಿದ್ದಾರೆಂದು ಆರೋಪಿಸಿ ಕೊಲ್ಕತ್ತಾ ವಿಶ್ವವಿದ್ಯಾಲಯ ವ್ಯಾಪ್ತಿಯ ಖಾಸಗಿ ಕಾನೂನು ಕಾಲೇಜಿನ ಪ್ರಾಧ್ಯಾಪಕಿಯೊಬ್ಬರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಆದರೆ ಇದೊಂದು ವಿವಾದವಾಗುತ್ತಿದ್ದಂತೆ ಇದನ್ನು ಸರಿಪಡಿಸಲಾದ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿದೆ. ಇದು ತಪ್ಪಾದ ಸಂವಹನದ ಪರಿಣಾಮವಾಗಿದೆ. ಶಿಕ್ಷಕಿ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡು ಜೂ. 11ರಂದು ತರಗತಿಗೆ ವಾಪಾಸ್ಸಾಗುತ್ತಾರೆ ಎಂದು ಸಂಸ್ಥೆ ತಿಳಿಸಿದೆ.
ಕಳೆದ ಮೂರು ವರ್ಷಗಳಿಂದ ಎಲ್‌ಜೆಡಿ ಕಾನೂನು ಕಾಲೇಜಿನ ಶಿಕ್ಷಕಿಯಾಗಿ ಸಂಜಿದಾ ಖಾದರ್‌ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರು ತಲೆಗೆ ಸ್ಕಾರ್ಫ್‌ ಧರಿಸುತ್ತಿದ್ದರು. ಮೇ 31ರಂದು ಕೆಲಸದ ಸ್ಥಳದಲ್ಲಿ ಹಿಜಾಬ್‌ ಧರಿಸಬೇಡಿ ಎಂದು ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದು ನನ್ನ ಮೌಲ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಜೂ.5ರಂದು ರಾಜೀನಾಮೆ ನೀಡಿದ್ದರು.
ಸಂಜಿದಾ ರಾಜೀನಾಮೆ ಸುದ್ದಿಯಾಗುತ್ತಿದ್ದಂತೆ, ಆಡಳಿತ ಮಂಡಳಿಯೇ ಅವರನ್ನು ಸಂಪರ್ಕಿಸಿದೆ. ಸ್ಕಾರ್ಫ್‌ ಧರಿಸಲು ಯಾವುದೇ ಅಡ್ಡಿಯಿಲ್ಲ, ಮತ್ತೆ ಕಾಲೇಜಿಗೆ ಬನ್ನಿ ಎಂದಿದೆ ಎಂದು ಮೂಲಗಳು ತಿಳಿಸಿವೆ.
ಸಂಸ್ಥೆಯ ಕಚೇರಿಯಿಂದ ಇ-ಮೇಲ್‌ ಬಂದಿದೆ. ಯೋಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಆದರೆ ಜೂ. 11ರಂದು ಕಾಲೇಜಿಗೆ ತೆರಳುತ್ತಿಲ್ಲ ಎಂದು ಸಂಜಿದಾ ಪ್ರತಿಕ್ರಿಯಿಸಿದ್ದಾರೆ.

RELATED ARTICLES
- Advertisment -
Google search engine

Most Popular