ಮೊಗವೀರ ಸಮಾಜದ ಬಂಗೇರ ಆದಿ ಮೂಲ ಸ್ಥಾನ ಹೊಡೆ ಏ.20 ಶನಿವಾರ ವಾರ್ಷಿಕ ಮೊಹೋತ್ಸವ ಅಂಗವಾಗಿ ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಪೂಜೆ, ಪಂಚಾಮೃತ ಅಭಿಷೇಕ, ಸಾವಿರಾರು ಬಂಡಾಭಿಷೇಕ, ಮಹಾ ನಾಗಾಭಿಷೇಕ ಹಾಗೂ ನಾಗದೇವರಿಗೆ ವಿಶೇಷ ಅಲಂಕಾರ, ದರ್ಶನ ಸೇವೆ, ತುಲಾ ಬಾರ ಸೇವೆ, ಸಾರ್ವಜನಿಕ ಮಹಾಅನ್ನಸಂತರ್ಪಣೆ ನಡೆಯಿತು. ಸುಮಾರು 45 ವರ್ಷಗಳಕಾಲ ಅರ್ಚಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕೃಷ್ಣ ಬಂಗೇರ ಬಡಾ ನಿಡಿಯೂರು ಇವರಿಗೆ ಬಂಗಾರದ ಖಡ್ಗವನ್ನು ತೊಡಿಸಿ ಶಾಲು ಹೊದಿಸಿ ಗೌರವಿಸಲಾಯಿತು. ಮೂಲ ಸ್ಥಾನ ಅಧ್ಯಕ್ಷರಾದ ನಾಗೇಶ್ ಬಂಗೇರ , ಕಾರ್ಯದರ್ಶಿ ಸೋಮಶೇಖರ ಬಂಗೇರ , ಮುಂಬಯಿ ಸಮಿತಿಯ ಅಧ್ಯಕ್ಷ ದೇವರಾಜ್ ಬಂಗೇರ , ತಿಲಕ್ ಬಂಗೇರ , ದಾಮೋದರ್ ಬಂಗೇರ, ಕರುಣಾಕರ್ ಬಂಗೇರ ,ಅರ್ಚಕ ಮಧುಕರ್ ಬಂಗೇರ, ಅಖಿಲ್ ಕುಮಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.