ನವದೆಹಲಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಮಾರ್ಚ್ 8ರಂದು ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ. ಮೆಟ್ರೋದ ಎಲ್ಲ ಮಾರ್ಗಗಳಲ್ಲಿ ಸಂಚಾರ ಬಂದ್ ಆಗಲಿದೆ.ಮಧ್ಯಾಹ್ನ 2. 30ರ ತನಕ ಮೆಟ್ರೋ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಎರಡು ದಿನ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಕೆಲವು ಕಡೆ ಮಾರ್ಚ್ ಏಳರಂದು ಆಚರಿಸಲಾಗುತ್ತಿದೆ. ಇತರೆಡೆ 8ರಂದು ಹೋಳಿ ಹಬ್ಬ.ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತ್ರರ ಭಾರತದಲ್ಲಿ ಹೋಳಿ ಹಬ್ಬ ಹೆಚ್ಚು ಜನಪ್ರಿಯತೆ ಪಡೆದಿದೆ.