ಕಿನ್ನಿಗೋಳಿ:1784 ರಲ್ಲಿ ಟಿಪ್ಪು ಸುಲ್ತಾನ್ ಮಂಗಳೂರು ಕ್ರೈಸ್ತರ ಮೇಲೆ ದಾಳಿ ಮಾಡಿದ್ದು ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯ ರೆಮೆದಿ ಅಮ್ಮನವರ ಇಗರ್ಜಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಸ್ಥಳೀಯ ಗುತ್ತು ಮನೆತನಗಳಾದ ತಾಳಿಪಾಡಿ ಗುತ್ತು,ಅಂಗಡಿಗುತ್ತು ಹಾಗೂ ಐಕಳಭಾವದವರು ಇಗರ್ಜಿಯನ್ನು ರಕ್ಷಿಸಿದ್ದರು ಇದರ ನೆನಪಿಗಾಗಿ ಇಂದಿಗೂ ಕೂಡ ಗುತ್ತುಮನೆತನದವರನ್ನು ಗುರುತಿಸಿದ್ದು ಇಗರ್ಜಿಯ ವಾರ್ಷಿಕ ಹಬ್ಬದಂದು ಇವರಿಗೆ ಧರ್ಮಗುರುಗಳಾದ ವಂದನೀಯ ಪಾದರ್ ಓಸ್ವೋಲ್ಡ್ ಮೊಂತೆರೋ ವೀಳ್ಯದೆಲೆ ಅಡಿಕೆ ಹಾಗೂ ಬಾಳೆಗೊನೆ ನೀಡಿ ಗೌರವಿಸಿದರು.
ಫಾದರ್ ಜಾರ್ಜ್ ಕ್ರಾಸ್ತ,ಪಾಲನ ಮಂಡಳಿಯ ಉಪಾಧ್ಯಕ್ಷರಾದ ರಿಚರ್ಡ್ ಡಿ’ಕೋಸ್ತ, ಕಾರ್ಯದರ್ಶಿ ಜೇಮ್ಸ್ ಲೋಬೊ, ಫಾದರ್ ಫ್ರಾನ್ಸಿಸ್ ಫೆರ್ನಾಂಡಿಸ್, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಾಳಿಪಾಡಿ ಗುತ್ತು ದಿನೇಶ್ ಬಂಡ್ರಿಯಾಲ್, ಅಂಗಡಿಗುತ್ತು ಬಾಲಕ್ರಷ್ಣ ಶೆಟ್ಟಿ,ಐಕಳಬಾವ ಜಯಪಾಲ ಶೆಟ್ಟಿ, ಸುಕುಮಾರ್ ಶೆಟ್ಟಿ ತಾಳಿಪಾಡಿ ಗುತ್ತು,ಶಂಭು ಶೆಟ್ಟಿ ಅಂಗಡಿಗುತ್ತು,ಐಕಳ ಬಾವ ಚಿತ್ತರಂಜನ್ ಭಂಡಾರಿ, ಪ್ರಸಾದ್ ಶೆಟ್ಟಿ, ದರ್ಶನ್ ಶೆಟ್ಟಿ,ಲೀಲಾಧರ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಾರ್ಷಿಕ ಹಬ್ಬದಂದು ಧರ್ಮಗುರುಗಳು, ಚರ್ಚ್ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.