Monday, July 15, 2024
Homeರಾಜ್ಯರೇಡಿಯೊ ಮಣಿಪಾಲದಲ್ಲಿ ಹೊಂಬೆಳಕು- 61ನೇ ಸಂಚಿಕೆ ಪ್ರಸಾರ

ರೇಡಿಯೊ ಮಣಿಪಾಲದಲ್ಲಿ ಹೊಂಬೆಳಕು- 61ನೇ ಸಂಚಿಕೆ ಪ್ರಸಾರ

ಮಣಿಪಾಲ್ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಜೆಸಿಐ ಕಲ್ಯಾಣಪುರ ದ ಸಹಯೋಗದಲ್ಲಿ ಅರ್ಪಿಸುತ್ತಿದೆ ಹೊಂಬೆಳಕು-ವ್ಯಕ್ತಿತ್ವ ವಿಕಸನ ಸರಣಿ ಕಾರ್ಯಕ್ರಮ. ಈ ಸರಣಿಯ 61 ನೇ ಸಂಚಿಕೆ ಜೂನ್ ತಿಂಗಳ ದಿನಾಂಕ 4 ರಂದು ಮಂಗಳವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆ ಯ ಶಿಕ್ಷಕ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಸಾಹಿತಿ ನರೇಂದ್ರ ಕುಮಾರ್ ಕೋಟ ನಡೆಸಿಕೊಡಲಿದ್ದಾರೆ. ಜೂನ್ 5 ರಂದು ಮಧ್ಯಾಹ್ನ 1.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ನಕ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular