Thursday, September 12, 2024
Homeಉಡುಪಿಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ ದಿನಾಂಕ: 30-08-2024ನೇ ಶುಕ್ರವಾರದಂದು ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ ಬರುವ ಠಾಣೆಗಳಿಗೆ ನಿಯೋಜಿಸುವ ಗೃಹರಕ್ಷಕರ ಪಟ್ಟಿಯನ್ನು ನೀಡುವ ಕುರಿತು, ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಠಾಣೆಗಳಿಗೆ ನಿಯೋಜಿಸುವ ಗೃಹರಕ್ಷಕರ ಪಟ್ಟಿಯನ್ನು ನೀಡುವ ಬಗ್ಗೆ, ಕವಾಯತು ಹಾಜರಾತಿ ಪಟ್ಟಿಯನ್ನು 5ನೇ ತಾರೀಖಿನೊಳಗೆ ನೀಡುವ ಕುರಿತು, ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಗೃಹರಕ್ಷಕರ ಕ್ಷೇಮಾಭಿವೃದ್ದಿ ನಿಧಿಗೆ ವಂತಿಗೆಯನ್ನು ಕಟ್ಟಲು ಬಾಕಿ ಇರುವ ಗೃಹರಕ್ಷಕರ ಬಗ್ಗೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಚರ್ಚಿಸಲಾಯಿತು. ಮೂರು ವರ್ಷಗಳನ್ನು ಮೀರಿದ ಗೃಹರಕ್ಷಕರು ನವೀಕರಣ ಮಾಡಿಸಲು ಸೂಚಿಸಲಾಯಿತು.

ಹೊಸ ಗೃಹರಕ್ಷಕರನ್ನು ಸಂಸ್ಥೆಗೆ ಸೇರ್ಪಡೆಗೊಳಿಸುವ ಕುರಿತು, ಸಮವಸ್ತ್ರಗಳನ್ನು ಪಡೆಯಲು ಬಾಕಿ ಇರುವ ಗೃಹರಕ್ಷಕರು ಪಡೆದುಕೊಳ್ಳುವ ಬಗ್ಗೆ ಮತ್ತು ಬೆಂಗಳೂರು ಮತ್ತು ದಾವಣಗೆರೆಯ ತರಬೇತಿ ಅಕಾಡೆಮಿಯಲ್ಲಿ ನಡೆಯುವ ತರೇತಿಗಳಿಗೆ ಎಲ್ಲಾ ಘಟಕಗಳಿಂದ ಗೃಹರಕ್ಷಕರನ್ನು ನಿಯೋಜಿಸುವಂತೆ ಸೂಚಿಸಲಾಯಿತು ಹಾಗೂ ಗೃಹರಕ್ಷಕರ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ. ರವರು. ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಾಧಿಕಾರಿಗಳಾದ ಐತಪ್ಪ, ಘಟಕಾಧಿಕಾರಿ, ಬಂಟ್ವಾಳ ಘಟಕ, ಅಭಿಮನ್ಯು ರೈ, ಘಟಕಾಧಿಕಾರಿ ಪುತ್ತೂರು ಘಟಕ, ತೀರ್ಥೇಶ್ ಘಟಕಾಧಿಕಾರಿ ಕಡಬ ಘಟಕ, ಪ್ರಭಾರ ಘಟಕಾಧಿಕಾರಿಗಳಾದ ಸುನಿಲ್,  ಉಳ್ಳಾಲ ಘಟಕ, ದಿನೇಶ್ ಬಿ.  ಉಪ್ಪಿನಂಗಡಿ ಘಟಕ, ರಮೇಶ್ ಸುರತ್ಕಲ್ ಘಟಕ, ಹರಿಶ್ಚಂದ್ರ ಸುಬ್ರಹ್ಮಣ್ಯ ಘಟಕ, ಜಯಾನಂದ ಬೆಳ್ತಂಗಡಿ ಘಟಕ, ಶಿವಪ್ಪ ನಾಯ್ಕ ಪಣಂಬೂರು ಘಟಕ, ಸಂಜೀವ ವಿಟ್ಲ ಘಟಕ, ಸುನಿಲ್ ಕುಮಾರ್ ಮಂಗಳೂರು ಘಟಕ, ಚಂದ್ರಶೇಖರ್ ಮೂಡಬಿದ್ರಿ ಘಟಕ ಇವರುಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular