Sunday, January 19, 2025
Homeರಾಜಕೀಯಮಚ್ಚಿನ: ಪಕ್ಷ ಪರಿವರ್ತನೆ: ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ

ಮಚ್ಚಿನ: ಪಕ್ಷ ಪರಿವರ್ತನೆ: ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ

ಮಚ್ಚಿನ : ಮಚ್ಚಿನ ಗ್ರಾಮದ ಕಾಂಗ್ರೆಸ್ ನಾ ಸಕ್ರಿಯ ನಾಯಕ ಸಂದೀಪ್ ಮಡಿವಾಳ್ ಮಚ್ಚಿನ ಇವರು ಕಾಂಗ್ರೆಸ್ ನಾ ಅಭಿವೃದ್ಧಿ ರಹಿತ ದುರಾಡಳಿ ವ್ಯವಸ್ಥೆ , ಭ್ರಷ್ಟಾಚಾರ,ಆರ್ಥಿಕ ಅಧೋಗತಿ, ಕುತಂತ್ರ ರಾಜಕೀಯವನ್ನು ಕಂಡು ಬೇಸತ್ತು ಬಿಜೆಪಿಗೆ ಸೇರ್ಪಡೆ ಗೊಂಡಿದ್ದಾರೆ. ಶಾಸಕರಾದ ಹರೀಶ್ ಪೂಂಜಾ ರವರು ಬಿಜೆಪಿ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕುವೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಚಂದ್ರಕಾಂತ ಗೌಡ ನಿಡ್ಡಾಜೆ, ಮಚ್ಚಿನ ಶಕ್ತಿ ಕೇಂದ್ರ ಪ್ರಮುಖ್ ನಾರಾಯಣ ಶೆಟ್ಟಿ, ಪಕ್ಷದ ಹಿರಿಯರಾದ ನಾರಾಯಣ ನಾವುಡ, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯರಾದ ಚಂದ್ರ ಶೇಖರ್ ಬಿ.ಎಸ್ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular