ಕಲಬುರಗಿ: ಯುವತಿಯರಿಗೆ ಕೆಲಸ, ನ್ಯಾಯ ಕೊಡಿಸುವುದಾಗಿ ಆತ್ಮೀಯತೆ ಬೆಳೆಸಿಕೊಂಡು ಅತ್ಯಾಚಾರ ಎಸಗುವುದರ ಜೊತೆಗೆ, ಯುವತಿಯರನ್ನು ಬಳಸಿಕೊಂಡು ಶ್ರೀಮಂತರು ಹಾಗೂ ಅಧಿಕಾರಿಗಳ ಬಳಿ ಹೆಣ್ಣು ಮಕ್ಕಳನ್ನು ಬಳಸಿ ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ದಂಧೆಯಲ್ಲಿ ನಿರತವಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಲಿತ ಸೇನೆ ಮುಖಂಡ ರಾಜು ಲೇಂಗಟಿಯನ್ನು ಬಂಧಿಸಿರುವ ಪೊಲೀಸರು, ತಡರಾತ್ರಿ ಪ್ರಭುಲಿಂಗ ಹಿರೇಮಠ ಎಂಬಾತನನ್ನು ಸಹ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನ ಶೋಧನಾ ಕಾರ್ಯ ಮುಂದುವರೆದಿದೆ.
ದಲಿತ ಸೇನೆಯ ಕೆಲವು ಕ್ರಿಮಿನಲ್ ಕಾರ್ಯಕರ್ತರು ತಮ್ಮನ್ನು ಬಳಸಿ ಜತೆಗೆ ವ್ಯಾಪಾರಿ ಜತೆ ಹಾಗೂ ಇತರರ ಜತೆ ಲೈಂಗಿಕ ಸಂಪರ್ಕಕ್ಕೆ ಬೆದರಿಸಿದ್ದಲ್ಲದೆ, ಈ ಸಂಬಂಧ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದಿದ್ದಾರೆ. ತದ ನಂತರ ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂ. ವಸೂಲಿ ಮಾಡಿದ್ದಾರೆ ಎಂದು ಸಂತ್ರಸ್ತೆಯರು ದೂರಿದ್ದಾರೆ.