Friday, March 21, 2025
Homeಕನ್ಯಾಡಿದ.ಕ ಜಿಲ್ಲೆಯ ಮಾನ್ಯ ಸಂಸದರು ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿ

ದ.ಕ ಜಿಲ್ಲೆಯ ಮಾನ್ಯ ಸಂಸದರು ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿ

ಕನ್ಯಾಡಿ (ಫೆ.08): ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ತಂಡವು ಕನ್ಯಾಡಿಯ ಸೇವಾನಿಕೇತನಕ್ಕೆ ಫೆಬ್ರವರಿ 8 ರಂದು ಭೇಟಿ ನೀಡಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಸಂಸ್ಥೆಯ ಬಗ್ಗೆ ಮಾತನಾಡಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಮಾಡುವಂತೆ ಮನವಿ ಸಲ್ಲಿಸಲಾಯಿತು. ಮನವಿ ಹಸ್ತಾಂತರವನ್ನು ಸ್ವೀಕರಿಸಿ ಕಟ್ಟಡದ ನಿರ್ಮಾಣ ಶೀಘ್ರ ನೆರವೇರುವಂತೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸೇವಾಧಾಮ ಸಂಚಾಲಕರಾದ ಶ್ರೀ ಕೆ. ಪುರಂದರ ರಾವ್, ಸೇವಾಭಾರತಿ ಟ್ರಸ್ಟಿ ಶ್ರೀ ಬಿ. ಕೃಷ್ಣಪ್ಪ ಗುಡಿಗಾರ್ , ಸೇವಾಭಾರತಿ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ನೈಮಿಷ, ಭಾರತೀಯ ಮಜ್ದೂರ್ ಸಂಘದ ರಾಜ್ಯಕಾರ್ಯದರ್ಶಿ ಶ್ರೀ ಜಯರಾಜ್ ಸಾಲ್ಯಾನ್, ಸಂಸ್ಥೆಯ ಸ್ವಯಂಸೇವಕರಾದ ಶ್ರೀ ಚಂದನ್ ಗುಡಿಗಾರ್ , ಶ್ರೀ ಜಯರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular