Sunday, July 14, 2024
Homeಪುತ್ತೂರುವಿವೇಕಾನಂದ ಪದವಿಪೂರ್ವ ಕಾಲೇಜಿನ ‌ನೀಟ್ ಸಾಧಕರಿಗೆ ಸನ್ಮಾನ

ವಿವೇಕಾನಂದ ಪದವಿಪೂರ್ವ ಕಾಲೇಜಿನ ‌ನೀಟ್ ಸಾಧಕರಿಗೆ ಸನ್ಮಾನ

ವ್ಯೆದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2024ರ ನೀಟ್‌ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. 720ಕ್ಕೆ 651 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 28266 ನೇ ರ್‍ಯಾಂಕ್‌ ಹಾಗೂ ಕೆಟಗರಿ ವಿಭಾಗದಲ್ಲಿ604ನೇ ರ್‍ಯಾಂಕ್‌ ಗಳಿಸಿದ ಯುಕ್ತಾ. ವಿ.ಜಿ, 563 ಅಂಕಗಳನ್ನು ಪಡೆದ ಇಂದುಶ್ರೀ ಹಾಗೂ 557 ಅಂಕಗಳನ್ನು ಪಡೆದ ಶ್ರೇಯಾ .ಕೆ. ಹಾಗೂ ಅವರ ಪಾಲಕರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ. ಕೆ.ಎನ್. ‌ಸುಬ್ರಹ್ಮಣ್ಯ ಹಾಗೂ ವತ್ಸಲಾ ರಾಜ್ಞಿ ಇವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಕೆ.ಎನ್. ಸುಬ್ರಹ್ಮಣ್ಯ ಅವರು ಮಾತನಾಡಿ, ವಿದ್ಯಾರ್ಥಿಗಳ ಅವಿರತ ಪರಿಶ್ರಮದ ಫಲಶ್ರುತಿಯು ಈ ಉತ್ತಮ ಫಲಿತಾಂಶವಾಗಿರುತ್ತದೆ. ಸುಸಂಸ್ಕೃತ ಪ್ರಜೆಯನ್ನು ವ್ಯೆದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಹೆಮ್ಮೆ ವಿವೇಕಾನಂದ ಪದವಿಪೂರ್ವ ಕಾಲೇಜಿನದ್ದಾಗಿರುತ್ತದೆ. ಓದಿದ ಸಂಸ್ಥೆಗೆ, ಹೆತ್ತವರಿಗೆ ಮಾದರಿಯಾದ ಈ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ” ಎಂದು ಶುಭನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್‌ ರೈ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಾಧಕರಿಗೆ ಶುಭಹಾರೈಸಿದರು. ಉಪನ್ಯಾಸಕಿ ದಯಾಮಣಿ ಟಿ.ಕೆ. ಕಾರ್ಯಕ್ರಮವನ್ನು ನಿರೂಪಿಸಿ ನೆರೆದವರನ್ನು ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular