ಇಂಟರ್ ನ್ಯಾಷನಲ್ ಕೌನ್ಸಿಲ್ ಏಷ್ಯಾ ವೇದಿಕೆ ಕಲ್ಚರಲ್ ಪೌಂಡೇಶನ್ ವತಿಯಿಂದ ಇಂದು ತಮಿಳುನಾಡಿನ ಹೊಸೂರು ನಗರದಲ್ಲಿ ನೆಡೆದ ಏಷ್ಯಾ ವೇದಿಕೆ ಕಲ್ಚರಲ್ ರಿಚರ್ಸ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕರ್ಜೆ ಸುಗ್ಗಿ ಸುಧಾಕರ ಶೆಟ್ಟಿಯವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಗುರುತಿಸಿ, ಸಮಾಜ ಸೇವಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪ್ರಾಧಾನ ಮಾಡಲಾಯಿತು. ಸಿ.ಮಾರ್ಗರೇಟ್ ಅಮೂಲ್ ಹೈಕೋರ್ಟ್ ನ್ಯಾಯವಾದಿಗಳು ಮತ್ತು ಏಷ್ಯಾ ವೇದಿಕೆ ಅಕಾಡೆಮಿಯ ಸಂಸ್ಥಾಪಕರು ಹಾಗೂ ತಮಿಳುನಾಡಿನ ಮಾಜಿ ಶಾಸಕರಾದ ಡಾ.ಕೆ.ಎ ಮನೋಹರನ್ ಅವರಿಂದ ಶನಿವಾರ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಯಿತು.
ಹುಬ್ಬಳ್ಳಿ ಧಾರವಾಡದ ಉದ್ಯಮಿಯಾದ , ಸಮಾಜ ಸೇವಕರಾದ ಕರ್ಜೆ ಶ್ರೀ ಸುಗ್ಗಿ ಸುಧಾಕರ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ
RELATED ARTICLES