ಕಾಸರಗೋಡು: ಗಡಿನಾಡು ಕಾಸರಗೋಡಿನ ಕೆ.ವಾಮನ್ ರಾವ್ ಬೇಕಲ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಅವರು ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೈಂಕರ್ಯಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ ಹಾಗೂ ಅನುಕರಣೀಯ. ಈ ನಿಟ್ಟಿನಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವ ನೀಡಲಾಗಿದೆ.
ಡಾಕ್ಟರೇಟ್ ಕಳೆದ ಎರಡು ದಶಕಗಳ ದೀರ್ಘಕಾಲ ಕನ್ನಡಪರ ಸೇವೆ, ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಯಾವುದೇ ಸಂಘ ಸಂಸ್ಥೆಗಳ ಹಾಗೂ ಸರಕಾರದಿಂದ ಅನುದಾನ ಪಡೆಯದೆ ಸ್ವಂತ ಆದಾಯದ ಒಂದಂಶವನ್ನು ಪತ್ನಿ ಸಂಧ್ಯಾರಾಣಿ ಟೀಚರ್ ಪು ತ್ರರಾದ ಸನತ್‌ಕುಮಾರ್, ಕಾರ್ತಿಕ್ ಕಾಸರಗೋಡು ಅವರ ಸಹಕಾರದಲ್ಲಿ ನೆರವೇರಿಸಿಕೊಂಡು ಬರುತ್ತಿರುವುದು ಉಲ್ಲೇಖನೀಯವಾಗಿದೆ.
ಈ ಜನಪರ ಅಪೂರ್ವ ಸಾಧನೆಯನ್ನು ಗಮನಿಸಿ విష్యా ಇಂಟರ್‌ನ್ಯಾಶನಲ್ ಕಲ್ಟರ್ ರಿಸರ್ಚ್
ಯೂನಿವರ್ಸಿಟಿ ಫೋರ್ ಚುನ್ ಐಟಿಸಿ ಹೊಸೂರು ತಮಿಳುನಾಡು ಇದರ ನೇತೃತ್ವದಲ್ಲಿ ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಶಿಯಲ್ ಸರ್ವೀಸಸ್ ವಿಭಾಗದಲ್ಲಿ ಕೆ.ವಾಮನ್ ರಾವ್ ಬೇಕಲ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.