ಹೆಬ್ರಿ : ಪ್ರಸಿದ್ಧ ನಾಡಿ ಶಾಸ್ತ್ರಜ್ಞ ಉಡುಪಿಯ ಪಿ.ಸುರೇಶ್ ಕುಮಾರ್ ಅವರಿಗೆ ನಾಡಿಗೆ ಸಲ್ಲಿಸಿದ ಸಮಾಜ ಸೇವೆ ಮತ್ತು ಆರೋಗ್ಯ ಸೇವೆಗಾಗಿ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದೆ. ಮುದ್ರಾಡಿಯಲ್ಲಿರುವ ಅರ್ಧನಾರೀಶ್ವರ ಸೇವಾ ಟ್ರಸ್ಟ್ ಮೂಲಕ ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದಾರೆ.

ಶಾಲೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಆರೋಗ್ಯ ಸೇವೆ ನೀಡುವುದು, ವಿವಿದೆಡೆ ಸ್ವಚ್ಚತಾ ಕಾರ್ಯವನ್ನು ಆಂದೋಲನದಂತೆ ನಡೆಸುವುದು, ಸಾರ್ವಜನಿಕ ಸ್ಥಳಗಳಲ್ಲಿ, ಸಂಸ್ಥೆಗಳ ಆವರಣದಲ್ಲಿ, ಆಸಕ್ತ ಬಡವರಿಗೆ ಸಾಗುವಾನಿ ಗಿಡಗಳನ್ನು ನೀಡಿ ನೆಟ್ಟು ಬೆಳೆಸಿ ಅದರ ನಿರ್ವಹಣೆಯನ್ನು ಮಾಡುವುದು ಹಾಗೂ ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡಿ ವಸ್ತ್ರದಾನ ಮಾಡುವುದು ಸೇರಿ ನಿರಂತರ ಸಮಾಜಮುಖಿ ಸೇವೆಯನ್ನು ಸಂಸ್ಥೆಯ ಮೂಲಕ ನಡೆಸುವುದಾಗಿ ಡಾ.ಪಿ.ಸುರೇಶ್ ಕುಮಾರ್ ತಿಳಿಸಿದರು. ಅನ್ನದಾನದ ಮೂಲಕ ಪ್ರತಿ ತಿಂಗಳು ಕೂಡ ಕಳೆದ ೨೫ ವರ್ಷಗಳಿಂದ ಆರೋಗ್ಯ ಶಿಬಿರಗಳನ್ನು ಸುರೇಶ್ ಕುಮಾರ್ ಆಯೋಜಿಸುತ್ತ ಬಂದಿದ್ದಾರೆ.