Saturday, December 14, 2024
Homeಪುತ್ತೂರುಅಗ್ನಿವೀರನಾಗಿ ಆಯ್ಕೆಗೊಂಡ ಪುನೀತ್‌ರಾಜ್‌ಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನ

ಅಗ್ನಿವೀರನಾಗಿ ಆಯ್ಕೆಗೊಂಡ ಪುನೀತ್‌ರಾಜ್‌ಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನ


ಭಾರತೀಯ ಸೇನೆ ನಡೆಸುವ ʼಅಗ್ನಿಪಥ್‌ʼ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಪುನೀತ್‌ರಾಜ್‌ ʼಅಗ್ನಿವೀರ್‌ʼ ಗೆ ಆಯ್ಕೆಗೊಂಡಿರುತ್ತಾರೆ.
ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಮಲೆನಾಡಿನ ತಪ್ಪಲು ಗ್ರಾಮವಾದ ಕೊಂಬಾರಿನವರಾದ ಇವರು ಬಡತನದ ಬೇಗೆಯಲ್ಲಿ ಬೆಂದು ಬೆಳೆದವರು. ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಸ್ವಂತ ಮನೆಯೂ ಇಲ್ಲದೆ ಬಂಧುಗಳ ಆಶ್ರಯದಲ್ಲಿ ತಾಯಿಯ ಜೊತೆ ವಾಸಮಾಡುತ್ತಿದ್ದರು.ದುರ್ದೈವವೆಂದರೆ, ಮೂರು ವರ್ಷಗಳ ಹಿಂದೆ ಕಾಯಿಲೆಯಿಂದ ತಾಯಿಯೂ ಮೃತಪಟ್ಟರು. ಬಳಿಕ ಮಾವನ ನೆರವಿನೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿದ ಇವರು, ಭಾರತೀಯ ಸೇನೆಯಲ್ಲಿ ಯೋಧರ ಹುದ್ದೆಗೆ ಅರ್ಜಿ ಆಹ್ವಾನಿಸಿರುವುದನ್ನು ಗಮನಿಸಿ ಅರ್ಜಿ ಹಾಕಿ 2024-2025 ನೇ ಸಾಲಿನಲ್ಲಿ ಭಾರತೀಯ ಸೇನೆ ನಡೆಸಿದ ಅಗ್ನಿಪಥ್‌ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು, ಅಗ್ನಿವೀರನಾಗಿ ಆಯ್ಕೆಗೊಂಡಿರುತ್ತಾರೆ. ಇವರು ಒಬ್ಬ ಉತ್ತಮ ಎನ್.ಸಿ.ಸಿ ಕೆಡೆಟ್‌ ಹಾಗೂ ಖೋ-ಖೋ ಪಟುವಾಗಿರುತ್ತಾರೆ.
ʼಅಗ್ನಿವೀರʼನಾಗಿ ಆಯ್ಕೆಗೊಂಡ ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ, ಉಪಪ್ರಾಂಶುಪಾಲರಾದ ದೇವಿಚರಣ್‌ ರೈ , ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಇವರನ್ನು ಅಭಿನಂದಿಸಿರುತ್ತಾರೆ.

RELATED ARTICLES
- Advertisment -
Google search engine

Most Popular