ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿ ಐದು ಮಂದಿ ಗಂಭೀರ ಗಾಯಗೋಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಪಡನ್ನಕ್ಕಾಡ್ ಎಂಬಲ್ಲಿ ನಡೆದಿದೆ.
ನೀಲೇಶ್ಚರ ಕಣಿಚ್ಚರದ ರಹ್ಮನ್ (5) ಮತ್ತು ಲಹೆಕ್ ನಬಾ (12) ಮೃತ ಮಕ್ಕಳಾಗಿದ್ದಾರೆ. ಕಣ್ಣೂರು ಕಡೆ ತೆರಳುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಗಿದೆ.
ಈ ಘಟನೆಯಲ್ಲಿ ಐಹರಾ (40) ಶೆರಿನ್ (15), ಕಾರು ಚಾಲಕ ಫಾಯಿಝ್, ಬಸ್ ಪ್ರಯಾಣಿಕರಾದ ಸೂರ್ಯ, ಅನಿಲ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಝಹರಾ ಮತ್ತು ಶೆರೆನ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.