ಉತ್ತರ ಪ್ರದೇಶ: ಬೈಕ್ಗೆ ಕಾರು ಡಿಕ್ಕಿ ಹೊಡೆಸಿ ಸವಾರನನ್ನು ಸರ್ಕಾರಿ ನೌಕರರೊಬ್ಬರು 30 ಕಿ.ಮೀ. ಎಳದೊಯ್ದ ಘಟನೆ ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಡೆದಿದೆ.
ಅವರು ತಮ್ಮ ಕಚೇರಿಗೆ ತಲುಪಿದಾಗ ಅಲ್ಲಿದ್ದವರು ಅವರ ಕಾರಿನೆದುರು ಶವವನ್ನು ಕಂಡಿದ್ದಾರೆ, ಆದರೆ ಆ ವ್ಯಕ್ತಿ ಮಾತ್ರ ತನಗೆ ಇದ್ಯಾವುದೂ ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ. ಅಪಘಾತ ನಡೆದ ಸ್ಥಳದಿಂದ 30 ಕಿ.ಮೀ. ದೂರದಲ್ಲಿರುವ ತಹಸೀಲ್ದಾರ್ ಕಚೇರಿಗೆ ವಾಹನ ತಲುಪಿದಾಗ ಕಾರಿನ ಕೆಳಗೆ ನರೇಂದ್ರ ಕುಮಾರ್ ಹಲ್ದಾರ್ ಎಂದು ಗುರುತಿಸಲಾದ ವ್ಯಕ್ತಿಯ ಮೃತದೇಹ ಇರುವುದು ಕಂಡುಬಂದಿದೆ.
ಸರ್ಕಾರಿ ವಾಹನದಲ್ಲಿದ್ದಾಗಲೇ ಅಪಘಾತ ಮಾಡಿದ್ದು, ನಾಯಬ್ ತಹಸೀಲ್ದಾರ್ನನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಕಚೇರಿಯ ಕೆಲಸಗಳಿಗಾಗಿ ನಾಯಬ್ ತಹಸೀಲ್ದಾರ್ ಶೈಲೇಶ್ ಕುಮಾರ್ ಅವಸ್ಥಿ ಸರ್ಕಾರಿ ಕಾರು ತೆಗೆದುಕೊಂಡು ಹೋಗಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ಹೇಳಿದ್ದಾರೆ.
ಪೊಲೀಸರ ತಂಡವು ರಸ್ತೆಯಲ್ಲಿ ರಕ್ತದ ಗುರುತುಗಳನ್ನು ಕಂಡು ವಾಹನದ ಕೆಳಗೆ ಶವ ಸಿಲುಕಿರಬಹುದು ಎಂದು ಅಂದಾಜಿಸಿದ್ದಾರೆ. ಅಕ್ಕಪಕ್ಕದಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಯಿತು.
ಪಯಾಗ್ಪುರ್ ಪೊಲಿಸ್ ಠಾಣೆ ವ್ಯಾಪ್ತಿಯ ಕೃಷ್ಣ ನಗರ ಕಾಲೊನಿಯಲ್ಲಿ ಹಲ್ದಾರ್ ವಾಸವಾಗಿದ್ದರು ಎಂದುತಿಳಿದು ಬಂದಿದೆ. ಆದರೆ ಅಪಘಾತವಾಗಿರುವ ಬಗ್ಗೆ ತಿಳಿಯದೇ ಇರುವುದು ಆಶ್ಚರ್ಯ ಮೂಡಿಸಿದೆ. ಟೋಲ್ ಪ್ಲಾಜಾ ಸೇರದಂತೆ ಎಲ್ಲೆಡೆ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಲಾಗುತ್ತಿದೆ. ಎಫ್ಐಆರ್ ದಾಖಲಿಸಲಾಗಿದೆ.
ಭೀಕರ ಘಟನೆ: ಅಪಘಾತ ಮಾಡಿ ಕಾರಿನಲ್ಲಿ ಬೈಕ್ ಸವಾರನನ್ನು 30 ಕಿ.ಮೀ. ಎಳೆದೊಯ್ದ ಸರ್ಕಾರಿ ನೌಕರ
RELATED ARTICLES