ಮೂವರು ಗೆಳತಿಯರು ಅಂಗಡಿ ಮುಂದೆ ಕೂತು ಏನನ್ನೋ ತಿನ್ನುತ್ತಾ, ಹರಟುತ್ತಿರುವಾಗ ಕಾದಾಡುತ್ತಾ ಎರಡು ಹಸುಗಳು ಸಡನ್ ಎಂಟ್ರಿ ಕೊಟ್ಟಿ ಅವರೆಡೆಗೆ ನುಗ್ಗಿದ್ದು, ಒಬ್ಬಳು ಯುವತಿ ಅವುಗಳ ಕಾದಟಕ್ಕೆ ಸಿಲುಕಿ ನಲುಗಿ ಹೋಗಿದ್ದಾಳೆ. ಈ ಘಟನೆ ಕುರಿತು ಭಯಾನಕ ವಿಡಿಯೋ ವೈರಲ್ ಆಗಿದೆ.
ಹೌದು, ಸೋಷಿಯಲ್ ಮೀಡಿಯಾಗಳಲ್ಲಿಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಅಂಗಡಿ ಒಂದರ ಮುಂದೆ ಮೂವರು ಹುಡುಗಿಯರಲ್ಲಿ ಇಬ್ಬರು ಹುಡುಗಿಯರು ಬೆಂಚ್ ಮೇಲೆ ಕುಳಿತುಕೊಂಡು ಮತ್ತೊಬ್ಬಳು ಪಕ್ಕದಲ್ಲೇ ನಿಂತು ಫ್ರೆಂಚ್ ಫ್ರೈಸ್ ಸವಿಯುತ್ತಿರುತ್ತಾರೆ. ಕುಳಿತಿದ ಹುಡುಗಿ ಇದ್ದಕ್ಕಿದ್ದಂತೆ ಆ ಏನೋ ಬರುತ್ತಿರುವುದನ್ನು ಗಮನಿಸಿ ಇನ್ನೇನು ಎದ್ದು ಓಡಬೇಕು ಅನ್ನೊವಷ್ಟರಲ್ಲಿ ಎಲ್ಲಿಂದಲೋ ಓಡಿ ಬಂದ ಎರಡು ಭಾರೀ ಗಾತ್ರದ ದನಗಳು ಏಕಾಏಕಿ ಹುಡುಗಿಯರ ಮೇಲೆ ಎರಗರುತ್ತವೆ.
ಆ ದನಗಳು ನುಗ್ಗಿದ ರಭಸಕ್ಕೆ ಒಬ್ಬಳು ಹುಡುಗಿ ಕೆಳಗೆ ಬಿದ್ದು, ಅವುಗಳ ಅಡಿ ಸಿಲುಕಿ ಅಪ್ಪಚ್ಚಿಯಾದರೆ ಮತ್ತೊಬ್ಬಳು ದೂರ ಹೋಗಿ ಬಿದ್ದಿದ್ದಾಳೆ. ಅಷ್ಟರಲ್ಲಿ ಕೆಲವು ಹುಡುಗರು ಬಂದು ತಕ್ಷಣ ದನಗಳನ್ನು ಬೆದರಿಸಿ, ಬಾಲಕಿಯರನ್ನು ರಕ್ಷಣೆ ಮಾಡಿದ್ದಾರೆ. ಪಕ್ಕದಲ್ಲಿದ್ದ ಮೂರನೇ ಹುಡುಗಿ ಜಸ್ಟ್ ಮಿಸ್ ಆಗಿದ್ದಾಳೆ. ಕೆಳಗೆ ಬಿದ್ದಿದ್ದ ಬಾಲಕಿಗೆ ಹಸುವಿನ ಕಾಲಿನಡಿಗೆ ಬಿದ್ದು, ತುಳಿಯಲ್ಪಟ್ಟಿದ್ದಾಳೆ. ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.