ಕಾಂತಾವರ-ಪಾಲಡ್ಕ-ಕಲ್ಲಮುಂಡ್ಕೂರು ಕಾರ್ಯವ್ಯಾಪ್ತಿಯನ್ನೊಳಗೊಂಡ ಹೊಸಬೆಳಕು ಸೇವಾಬಳಗ ಕೇಪ್ಲಾಜೆ ಘಟದ ವತಿಯಿಂದ ಪ್ರಥಮ ಸೇವಾ ಯೋಜನೆಯನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಲಡ್ಕ ಗ್ರಾಮದ ಕಿನ್ನಿಪದವು ನಿವಾಸಿ ಬಾಲಕೃಷ್ಣ ಇವರ ವೈದ್ಯಕೀಯ ನೆರವಿಗಾಗಿ ರೂ 20,000 ಯನ್ನು ಪತ್ನಿ ಸುಶೀಲಾ ರವರಿಗೆ ವಿತರಿಸಲಾಯಿತು.
ದ್ವಿತೀಯ ಸೇವಾ ಯೋಜನೆಯನ್ನು ಪುತ್ತಿಗೆ ಗ್ರಾಮದ ಮಿತ್ತಬೈಲು ಬಂಕಿಮಜಲುನ ಅಸಹಾಯಕ ಸ್ಥಿತಿಯಲ್ಲಿರುವ ಬೇಬಿ ಹಾಗೂ ಅವರ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು 5,000 ಹಾಗೂ 5,000 ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಹೊಸಬೆಳಕು ಸೇವಾಬಳಗ ಕೇಪ್ಲಾಜೆ ಘಟಕದ ಅಧ್ಯಕ್ಷರಾದ ಮೋಹನದಾಸ ಅಡ್ಯಾಂತಾಯ, ಸ್ಥಾಪಕಧ್ಯಕ್ಷ ಮಹೇಶ್ ಜೆ ಕೋಟ್ಯಾನ್, ಗೌರವ ಅಧ್ಯಕ್ಷರಾದ ಪದ್ಮನಾಭ ಅಮೀನ್, ಶಿವಪ್ರಸಾದ್ ಶೆಟ್ಟಿ, ಸಂಚಾಲಕರಾದ ಸತೀಶ್, ಜಯಕರ ಕಾಂತಾವರ, ಕಾರ್ಯದರ್ಶಿ ಮಹೇಶ್ ಕೇಮಾರು, ಕೋಶಾಧಿಕಾರಿ ರೋಹಿತ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ, ಯೋಗೇಶ್ , ಹರೀಶ್ ಪುನ್ಕೆದಡಿ ಉಪಸ್ಥಿತರಿದ್ದರು