Wednesday, July 24, 2024
Homeರಾಜ್ಯಸಾಲ ಮರುಪಾವತಿ ವಿಳಂಬಕ್ಕೆ ಪತ್ನಿ, ಮಗನ ಗೃಹ ಬಂಧನದಲ್ಲಿಟ್ಟ ಮಹಿಳೆ: ರೈತ ಆತ್ಮಹತ್ಯೆ

ಸಾಲ ಮರುಪಾವತಿ ವಿಳಂಬಕ್ಕೆ ಪತ್ನಿ, ಮಗನ ಗೃಹ ಬಂಧನದಲ್ಲಿಟ್ಟ ಮಹಿಳೆ: ರೈತ ಆತ್ಮಹತ್ಯೆ

ಚಿಕ್ಕೋಡಿ: ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ ಪತ್ನಿ ಹಾಗೂ ಮಗನನ್ನು ಮಹಿಳೆಯೊಬ್ಬಳು ಗೃಹ ಬಂಧನದಲ್ಲಿಟ್ಟದ್ದಕ್ಕೆ ಮನನೊಂದು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ. ಹುಕ್ಕೇರಿಯ ಇಸ್ಲಾಂಪುರದಲ್ಲಿ ಈ ಘಟನೆ ನಡೆದಿದೆ.

ಆತ್ಮಹತ್ಯೆಗೈದ ರೈತನನ್ನು ರಾಜು ಖೋತಗಿ ಎಂದು ಗುರುತಿಸಲಾಗಿದೆ. ಬೆಳೆ ನಷ್ಟದಿಂದ ರೈತ ರಾಜು ಸ್ವಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆಯಿಂದ 5 ತಿಂಗಳ ಹಿಂದೆ 1.5 ಲಕ್ಷ ರೂ. ಹಣ ಸಾಲ ಪಡೆದಿದ್ದರು. ಎರಡು ದಿನಗಳ ಹಿಂದೇ ಒಂದೇ ಬಾರಿಗೆ ಹಣ ಹಿಂದಿರುಗಿಸುವಂತೆ ಮಹಿಳೆ ಒತ್ತಾಯಿಸಿದ್ದಳು. ರೈತನ ಪತ್ನಿ ಹಾಗೂ ಪುತ್ರನನ್ನು ಗೃಹ ಬಂಧನದಲ್ಲಿಟ್ಟಿದ್ದಳು.

ಪರಿಪರಿಯಾಗಿ ಬೇಡಿಕೊಂಡರೂ ಮಹಿಳೆ ಪತ್ನಿ ಹಾಗೂ ಪುತ್ರನನ್ನು ಬಿಡದಿದ್ದುದರಿಂದ ಮನನೊಂದು ರೈತ ರಾಜು ಆತ್ಮಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ದೂರು ನೀಡಲು ತೆರಳಿದ್ದಾಗ ಪೊಲೀಸರು ವಿಳಂಬ ನೀತಿ ಅನುಸರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯಮನಕರಡಿ ಪೊಲೀಸರ ವಿರುದ್ಧ ಆರೋಪ ಕೇಳಿಬಂದಿದೆ.

RELATED ARTICLES
- Advertisment -
Google search engine

Most Popular