ಹಾವೇರಿ: ಸತತ ಮಳೆಯಿಂದಾಗಿ ದುರ್ಬಲಗೊಂಡ ಮನೆ ಕುಸಿದು ಅವಳಿ ಮಕ್ಕಳು ಮತ್ತು ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಸವಣೂರಿನ ಮಾದಾಪುರದಲ್ಲಿ ಘಟನೆ ನಡೆದಿದೆ. ಒಂದೂವರೆ ವರ್ಷದ ಅಮೂಲ್ಯ, ಅನನ್ಯ ಹಾಗೂ ಚನ್ನಮ್ಮ (30) ಮೃತ ದುರ್ದೈವಿಗಳು. ಮೂವರಿಗೆ ಗಾಯಗಳಾಗಿವೆ. ಯಲ್ಲವ್ವ, ಮುತ್ತು ಹರಕೂನಿ, ಸುನೀತಾ ಎಂಬವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರಂತರ ಮಳೆ ಸುರಿದುದರಿಂದ ಮನೆ ದುರ್ಬಲಗೊಂಡು ಕುಸಿದಿದೆ.