ಉಡುಪಿ: ಇಲ್ಲಿನ ಕಟ್ಟೆಗುಡ್ಡೆಯಲ್ಲಿ ಮನೆಯೊಂದು ಕುಸಿದು ಬಿದ್ದ ಘಟನೆ ಇಂದು ನಡೆದಿದೆ. ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಡೆಕಾರು ಪಂಚಾಯತಿಯ ಶಾರದಾ ಪೂಜಾರಿ ಎಂಬವರಿಗೆ ಸೇರಿದ ಮನೆ ಕುಸಿದಿದೆ. ಘಟನೆ ವೇಳೆ ಮನೆಯಲ್ಲಿ 10 ಮಂದಿ ಇದ್ದರು ಎನ್ನಲಾಗಿದೆ.
30 ವರ್ಷಗಳಷ್ಟು ಹಳೆಯದಾದ ಈ ಮನೆ ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿತ್ತು. ಮನೆ ಕುಸಿಯುವ 10 ನಿಮಿಷ ಮೊದಲು ಮನೆಯವರು ಮನೆಯಿಂದ ಹೊರಬಂದಿದ್ದಾರೆ. ಮನೆ ಕುಸಿಯುವುದಕ್ಕೆ ಮೊದಲು ನಾಲ್ಕು ಮಂದಿ ಮಕ್ಕಳು ಕುಸಿತವಾಡ ಕೊಠಡಿಯಲ್ಲೇ ಇದ್ದರು. ಆದರೆ ಅವರು ಹೊರಬಂದ ಬಳಿಕ ಕುಸಿತವಾಗಿದೆ. ಇದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಮಕ್ಕಳ ಆಟಿಕೆಗಳು, ಬಟ್ಟೆಬರೆಗಳು ಮತ್ತು ಇತರ ದಾಖಲೆಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ. ಮನೆಯಲ್ಲಿದ್ದ ಕುಟುಂಬವನ್ನು ಈಗ ಬಾಡಿಗೆ ಮನೆಯೊಂದಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.