ಬೈಂದೂರಿನಲ್ಲಿ ಕಿಶೋರ ಯಕ್ಷಗಾನ ಸಮಾಪನ

0
15

ಬೈಂದೂರು ಪದವಿಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ನಾಲ್ಕು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನ 28-12-2025 ರಂದು ಮುಕ್ತಾಯಗೊಂಡಿತು. ಹಿರಿಯರಾದ ವಿಶ್ವೇಶ್ವರ ಅಡಿಗರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಮಂಜುನಾಥ ಶೆಟ್ಟಿ, ಗೋಪಾಲಕೃಷ್ಣ ಕಲ್ಮಕ್ಕಿ, ರಾಜಶೇಖರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು. ಉಪ ಪ್ರಾಂಶುಪಾಲ ಪದ್ಮನಾಭ ವಿ. ನೊಡೆಲ್ ಶಿಕ್ಷಕ ಪ್ರಭಾಕರ, ನಾರಾಯಣ ಎಂ. ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸಮನ್ವಿ, ರಕ್ಷಿತಾ ಹೆಗಡೆ, ಕೃತಿಕಾ ಗಾಣಿಗ, ಅರ್ಜುನ, ಸಿಂಧು, ಐಶ್ವರ್ಯ ಯಕ್ಷ ಶಿಕ್ಷಣದ ಸ್ಮರಣೀಯ ಅನುಭವ ಹಂಚಿಕೊಂಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ಸುರೇಶ ಬಟವಾಡಿ ಸ್ವಾಗತಿಸಿದರು. ಪದ್ಮನಾಭ ವಿ. ವಂದಿಸಿದರು.
ರವೀಂದ್ರ. ಪಿ ಕಾರ್ಯಕ್ರಮ ನಿರೂಪಿಸಿದರು. ನಾವುಂದದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ವಿದ್ಯುನ್ಮಾಲಿ ವಧೆ – ಸುಬಾಹು ಕಾಳಗ’ ಹಾಗು ಸರಕಾರಿ ಪ್ರೌಢಶಾಲೆ ಮರವಂತೆ ಇಲ್ಲಿಯ ವಿದ್ಯಾರ್ಥಿಗಳಿಂದ ‘ಅಭಿಮನ್ಯು ಕಾಳಗ’ ಪ್ರಸ್ತುತಗೊಂಡಿತು.

LEAVE A REPLY

Please enter your comment!
Please enter your name here