ಹುಬ್ಬಳ್ಳಿ: ಹುಬ್ಬಳ್ಳಿ ಸಾಯಿನಗರ ಅಚವ್ವನ ಕಾಲೋನಿಯ ಈಶ್ವರ ದೇವಸ್ಥಾನ ಬಳಿಯ ಕಟ್ಟಡದಲ್ಲಿ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಇಲ್ಲಿನ ವಿದ್ಯಾನಗರ ಕಟ್ಟಿಮನಿ ಶಾಲೆಯ ವಿದ್ಯಾರ್ಥಿಯಾದ ಊಣಕಲ್ಲ ಸುಬಾನಿ ನಗರದ ರಾಜು ಕೃಷ್ಣ ಮುಗೇರಿ (16) ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಈಶ್ವರ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ತಂಗಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಭಾನುವಾರ ರಾತ್ರಿ ಪೂಜೆ ಸಲ್ಲಿಸಿ ಸನ್ನಿದಾನದ ಬಳಿ ಮಲಗಿದ್ದಾಗ ಗ್ಯಾಸ್ ಸೋರಿಕೆಯಾಗಿ ಈ ಅವಘಡ ಸಂಭವಿಸಿದೆ. ಇದರಲ್ಲಿ ಬಾಲಕ ಸೇರಿ ಒಂಭತ್ತು ಮಂದಿ ಸುಟ್ಟು ಗಾಯಗೊಂಡಿದ್ದರು.
ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ಗುರುವಾರ ನಿಜಲಿಂಗಪ್ಪ ಬೇಪುರಿ, ಹಾಗೂ ಸಂಜಯ ಸವದತ್ತಿ ಮೃತಪಟ್ಟಿದ್ದರು. ಶುಕ್ರವಾರ ರಾಜು ಮುಗೇರಿ ಮೃತಪಟ್ಟಿದ್ದು, ಇದುವರೆಗೆ ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಇನ್ನುಳಿದ 5 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿ