ಡಿಸೆಂಬರ್ 31, 2024ಕ್ಕೆ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅವಧಿಗೆ ಐಡಿಬಿಐ ಬ್ಯಾಂಕ್ ಇಂದು ಕ್ಯೂ3 ಎಫ್.ವೈ.25ರ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ಕ್ಯೂ3 ಎಫ್.ಐ.25ರಲ್ಲಿ ನಿವ್ವಳ ಲಾಭವು ₹1,908 ಕೋಟಿ ಇದ್ದು ವರ್ಷದಿಂದ ವರ್ಷಕ್ಕೆ ಶೇ.31ರಷ್ಟು ಸದೃಢ ಪ್ರಗತಿ ದಾಖಲಿಸಿದೆ. ಕಾರ್ಯ ನಿರ್ವಹಣಾ ಲಾಭವು ₹2,802 ಕೋಟಿ ಎನ್.ಐ.ಎಂ. ಶೇ.5.17ರಷ್ಟು ಮತ್ತು ಬಡ್ಡಿ ಆದಾಯವು ₹4,228 ಕೋಟಿ ಇದ್ದು ವರ್ಷದಿಂದ ವರ್ಷಕ್ಕೆ ಶೇ.23ರಷ್ಟು ಪ್ರಗತಿ ಸಾಧಿಸಿದೆ. ಠೇವಣಿ ವೆಚ್ಚವು ಕ್ಯೂ3-2025ಕ್ಕಕೆ ಶೇ.4.63ರಷ್ಟಿದ್ದು ಕ್ಯೂ3-2024ರಲ್ಲಿ ಶೇ.4.34 ಇತ್ತು. ಸಿ.ಆರ್.ಎ.ಆರ್. ಶೇ.21.98 ಇದ್ದು ವರ್ಷದಿಂದ ವರ್ಷಕ್ಕೆ 166 ಬಿಪಿಎಸ್ ಪ್ರಗತಿ ಹೊಂದಿದೆ. ರಿಟರ್ನ್ ಆನ್ ಅಸೆಟ್ಸ್ (ಆರ್.ಒ.ಎ) 29 ಬಿಪಿಎಸ್ ದಾಖಲಿಸಿದ್ದು ಇದ್ದು ಕ್ಯೂ-2025ರಲ್ಲಿ ಶೇ.1.99 ಇದ್ದು ಕ್ಯೂ3-2024ರಲ್ಲಿ ಶೇ.1.70 ಇತ್ತು ಮತ್ತು ರಿಟರ್ನ್ ಆನ್ ಈಕ್ವಿಟಿ (ಆರ್.ಒ.ಇ.) ಶೇ.20.13ರಷ್ಟಿದೆ (ವರ್ಷದಿಂದ ವರ್ಷಕ್ಕೆ ಪ್ರಗತಿ 56 ಬಿಪಿಎಸ್). ನಿವ್ವಳ ಎನ್.ಪಿ.ಎ ಶೇ.0.18ರಷ್ಟಿದ್ದು ಡಿಸೆಂಬರ್ 31, 2023ಕ್ಕಿಂತ ಶೇ.0.34ರಷ್ಟು ಕಡಿಮೆಯಾಗಿದೆ. ನಿವ್ವಳ ಎನ್.ಪಿ.ಎ ಡಿಸೆಂಬರ್ 31, 2023ಕ್ಕೆ 3.57 ಇದ್ದು ಡಿಸೆಂಬರ್ 2023ರಲ್ಲಿ ಶೆ.4.69 ಇತ್ತು. ಪಿಸಿಆರ್ ಶೇ.99.47 ಇದ್ದು ಡಿಸೆಂಬರ್ 31, 2023ಕ್ಕೆ ಶೇ.99.17 ಇತ್ತು.
ಐಡಿಬಿಐ ಬ್ಯಾಂಕ್ ಲಿಮಿಟೆಡ್- ಹಣಕಾಸು ಫಲಿತಾಂಶಗಳು
RELATED ARTICLES