Monday, February 10, 2025
Homeಬೆಂಗಳೂರುಐಡಿಬಿಐ ಬ್ಯಾಂಕ್ ನಿಂದ ಐಡಿಬಿಐ ಚಿರಂಜೀವಿ ಸೂಪರ್ ಸೀನಿಯರ್ ಸಿಟಿಜನ್ ಎಫ್.ಡಿ. ಬಿಡುಗಡೆ

ಐಡಿಬಿಐ ಬ್ಯಾಂಕ್ ನಿಂದ ಐಡಿಬಿಐ ಚಿರಂಜೀವಿ ಸೂಪರ್ ಸೀನಿಯರ್ ಸಿಟಿಜನ್ ಎಫ್.ಡಿ. ಬಿಡುಗಡೆ


ಐಡಿಬಿಐ ಬ್ಯಾಂಕ್ ತನ್ನ ಐಡಿಬಿಐ ಚಿರಂಜೀವಿ ಸೂಪರ್ ಸೀನಿಯರ್ ಸಿಟಿಜನ್ ಎಫ್.ಡಿ.’ ಎಂಬ ವಿಶೇಷ ನಿಶ್ಚಿತ ಠೇವಣಿ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು ಇದು 80 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರ ಹಣಕಾಸು ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ. ಈ ಉಪಕ್ರಮವು ಸಾಮಾನ್ಯ ನಿಶ್ಚಿತ ಠೇವಣಿಗಿಂತ ಹೆಚ್ಚುವರಿ 65 ಬೇಸಿಸ್ ಪಾಯಿಂಟ್(ಬಿಪಿಎಸ್) ಗಳು ಮತ್ತು ಹಿರಿಯ ನಾಗರಿಕರ ದರಗಳಿಗಿಂತ 15 ಬೇಸಿಸ್ ಪಾಯಿಂಟ್(ಬಿಪಿಎಸ್) ಗಳನ್ನು ನೀಡುತ್ತದೆ. ಈ ಕೊಡುಗೆಯ ಪ್ರಮುಖಾಂಶಗಳು ಹೀಗಿವೆ: ಗರಿಷ್ಠ ಬಡ್ಡಿದರ: 555 ದಿನಗಳ ಅವಧಿಗೆ ವಾರ್ಷಿಕ ಬಡ್ಡಿದರ ಶೇ.8.05 ಇತರೆ ಅವಧಿಯ ದರಗಳು: o 375 ದಿನಗಳಿಗೆ ವಾರ್ಷಿಕ ಶೇ.7.90 o 444 ದಿನಗಳಿಗೆ ವಾರ್ಷಿಕ ಶೇ.8.00 o 700 ದಿನಗಳಿಗೆ ವಾರ್ಷಿಕ ಶೇ.7.85 ಐಡಿಬಿಐ ಲಿಮಿಟೆಡ್ ಡೆಪ್ಯುಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುಮಿತ್ ಫಕ್ಕ, “ನಾವು ಹಿರಿಯ ನಾಗರಿಕರ ವಿಶಿಷ್ಟ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡುಐಡಿಬಿಐ ಚಿರಂಜೀವಿ-ಸೂಪರ್ ಸೀನಿಯರ್ ಸಿಟಿಜನ್ ಎಫ್.ಡಿ.’ ಉತ್ಪನ್ನವನ್ನು ಬಿಡುಗಡೆ ಮಾಡಲು ಬಹಳ ಸಂತೋಷ ಹೊಂದಿದ್ದೇವೆ. ಈ ಕೊಡುಗೆಯು ಅತ್ಯಂತ ಗೌರವಾನ್ವಿತ ವರ್ಗಕ್ಕೆ ಸುರಕ್ಷಿತ ಮತ್ತು ಭದ್ರತೆಯ ಹೂಡಿಕೆಯ ಆಯ್ಕೆ ನೀಡುವ ಮೂಲಕ ಅವರ ಹಣಕಾಸು ಭದ್ರತೆ ಮತ್ತು ಮನಃಶಾಂತಿ ನೀಡುತ್ತದೆ” ಎಂದರು

RELATED ARTICLES
- Advertisment -
Google search engine

Most Popular