ವರದಿ ರಾಯಿ ರಾಜ ಕುಮಾರ
ಮಂಗಳೂರಿನಲ್ಲಿ ವಿ ಆರ್ ಸೈಕ್ಲಿಂಗ್ ಎಂದೇ ಜನಪ್ರಿಯವಾಗಿರುವ ಕ್ರೀಡಾ ಕ್ಲಬ್ ಡಿಸೆಂಬರ್ 21 ರಂದು ಮಕ್ಕಳು, ಪೋಷಕರಿಗೆ ಸೈಕ್ಲಿಂಗ್ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿಸೆಂಬರ್ 21 ರಂದು ಐಡಿಯಲ್ ಮಂಗಳೂರು ಸೈಕ್ಲೋಥಾನ್ 2025 ನ್ನು ಆಯೋಜಿಸಿರುತ್ತಾರೆ. ಆರೋಗ್ಯಕರ ಜೀವನ ಶೈಲಿಯ ಉತ್ತೇಜನಕ್ಕಾಗಿ ಮನಸ್ಸು, ದೇಹ, ಆತ್ಮವನ್ನು ಆರೋಗ್ಯ ಮತ್ತು ಫಿಟ್ನೆಸ್ ಮೂಲಕ ಸಂತೋಷಕರ ಜೀವನವನ್ನು ಸಾಧಿಸುವ ಉದ್ದೇಶವನ್ನು ಕ್ರೀಡಾ ಕ್ಲಬ್ ಹೊಂದಿದೆ . ಮಂಗಳ ಕ್ರಿಡಾಂಗಣದಿಂದ ಬೆಳಗ್ಗೆ ಏಳು 15 ಕ್ಕೆ ಪ್ರಾರಂಭವಾಗಲಿರುವ ಸೈಕ್ಲೋಥಾನ್ ಲೇಡಿಹಿಲ್, ಸಿಟಿ ಕಾರ್ಪೊರೇಷನ್, ಕೆನರಾ ಕಾಲೇಜು, ಜೈಲ್ ರಸ್ತೆ, ಕರಂಗಲ್ಪಾಡಿ, ಪಿವಿ ಎಸ್, ಎಂ ಜಿ ರಸ್ತೆ ಮೂಲಕ ಉರ್ವ ಗ್ರೌಂಡ್ ನ ಕೆನರಾ ಕಾಲೇಜಿನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹರ್ಣೀಶ್ ರಾಜ್ ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.

