ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆಯನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ದಿನೇಶ್ ಪುತ್ರನ್, ಪ್ರಧಾನಕಾರ್ಯದರ್ಶಿ ರಂಜಿತ್ ಪೂಜಾರಿ, ಕಾರ್ಯದರ್ಶಿ ಸಾತ್ವಿಕ್ ಮಲ್ಯ, ಕೊಶಾಧಿಕಾರಿ ಪ್ರಭಾಕರ್ ಕುಲಾಲ್ , ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಾಜಿ ಪುರಸಭಾದ್ಯಕ್ಷ ಪ್ರಸಾದ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಲಕ್ಮಣ ಪೂಜಾರಿ, ಕಾರ್ಯದರ್ಶಿ ಯಶವಂತ್, ಪುತ್ತಿಗೆ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಶಿವಕುಮಾರ್, ಪಕ್ಷದ ಪ್ರಮುಖ ಪದಾಧಿಕಾರಿಗಳಾದ ದಿನೇಶ್ ಮಾರೂರು, ಶಶಿಧರ್ ಅಂಚನ್ ಎನಕ್ರಿಪಲ್ಲ, ನಾಗೇಶ್ ಅಮೀನ್ , ಸಂಪತ್ ಪೂಜಾರಿ ನೆತ್ತೋಡಿ, ಸಚಿನ್ ಪಣಪಿಲ, ಪ್ರಶಾಂತ್ ಅಮೀನ್, ಸುದರ್ಶನ ಆಚಾರ್ಯ , ಕಾರ್ತಿಕ್ ಸೇರಿದಂತೆ ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.