Saturday, July 20, 2024
Homeರಾಜ್ಯಹೆಜಮಾಡಿ ಟೋಲ್ ನಲ್ಲಿ ಸ್ಥಳೀಯರಿಂದ ಸುಂಕ ವಸೂಲು ಮಾಡಿದ್ರೆ ಕರವೇಯಿಂದ ಉಗ್ರ ಹೋರಾಟದ ಎಚ್ಚರಿಕೆ :...

ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯರಿಂದ ಸುಂಕ ವಸೂಲು ಮಾಡಿದ್ರೆ ಕರವೇಯಿಂದ ಉಗ್ರ ಹೋರಾಟದ ಎಚ್ಚರಿಕೆ : ಎಂ ಎಸ್ ಸೈಯ್ಯದ್ ನಿಜಾಮುದ್ದೀನ್

ಉಡುಪಿ : ಹೆಜಮಾಡಿ ಸುಂಕ ವಸೂಲಾತಿ ಕೇಂದ್ರದಲ್ಲಿ ಸ್ಥಳೀಯರಿಂದ ಸುಂಕ ವಸೂಲಿ ಮಾಡಲು ಮುಂದಾದ ಕಂಪನಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಸಂಚಾಲಕರಾಗಿರುವ ಎಂ. ಎಸ್. ಸೈಯ್ಯದ್ ನಿಜಾಮುದ್ದೀನ್ ರವರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಕಂಪನಿ ದಿಢೀರನೆ ಸುಂಕ ವಸೂಲಿಗೆ ಮುಂದಾಗಿರುವುದು ತಪ್ಪು. ಕಳೆದ ಸಲ ಇದೇ ಸ್ಥಳೀಯರಿಗೆ ವಿನಾಯಿತಿ ರದ್ದುಗೊಳಿಸಿದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ 48 ದಿನಗಳ ಅನಿರ್ದಿಷ್ಟಾವಧಿ ಹೋರಾಟ ನಡೆಸಿ ಸ್ಥಳೀಯರಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು.

ಒಂದು ವೇಳೆ ಕಂಪೆನಿ ಸ್ಥಳೀಯರಿಂದ ಸುಂಕ ವಸೂಲಿ ಮಾಡಲು ಮುಂದಾದರೆ ವಸೂಲಾತಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾ ಸಂಚಾಲಕರಾದ ಎಂ. ಎಸ್. ಸೈಯ್ಯದ್ ನಿಜಾಮುದ್ದೀನ್ ಆಗ್ರಹಿಸಿರುತ್ತಾರೆ.

RELATED ARTICLES
- Advertisment -
Google search engine

Most Popular