ಜ್ಞಾನ ಸೌರಭ ವಾರ್ಷಿಕ ಕ್ರೀಡಾಕೂಟ ಇವತ್ತು ಜ್ಞಾನ ಭಾರತಿ ಶಾಲೆಯಲ್ಲಿ ನಡೆಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಇಕ್ಬಾಲ್ ಜೋಗಿಬೆಟ್ಟು ಮಾತನಾಡಿ ಕ್ರೀಡೆಗೆ ಶಿಕ್ಷಣದ ಹಾಗೆ ಮಹತ್ವ ನೀಡಬೇಕು ಎಂದರು.ಅಡಳಿತ ಮಂಡಳಿ ಸದಸ್ಯರಾದ ಸುಲೈಮಾನ್ ಬಿ.ಕೆ ಕಾರ್ಯಕ್ರಮದ ದ್ವಜಾರೊಹಣ ಮಾಡಿದರು. ಶಾಲಾ ಸಂಚಾಲಕ ಅಬ್ದುಲ್ ರವೂಫ್ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿ ಎಂದರು.
ಮುಖ್ಯ ಶಿಕ್ಷಕಿಯರಾದ ಅರುಣಾ ಮತ್ತು ತಾಹಿರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾಪ್ರಾಂಶುಪಾಲರು ಎಲ್ಲರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿವಿಧ ಬಗೆಯ ಕ್ರೀಡೆಯಲ್ಲಿ ಪಾಲ್ಗೊಂಡರು.