ಅಪಾರ್ಟ್ಮೆಂಟ್‌ನಲ್ಲೇ ಅಕ್ರಮ ಮಾದಕ ವಸ್ತು ವ್ಯಾಪಾರ – ಕೇರಳ ಮೂಲದ ಇಬ್ಬರ ಬಂಧನ

0
76

ಐಷಾರಾಮಿ ಜೀವನ ಶೈಲಿಯಲ್ಲಿ ಕಾಣಿಸಿಕೊಂಡಿದ್ದ ಯುವಕ-ಯುವತಿಯರ ಅಸಲಿ ಮುಖವನ್ನು ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಬಯಲು ಮಾಡಿದ್ದಾರೆ. ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಒಂದರ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 10 ಕೋಟಿ ರೂ. ಮೌಲ್ಯದ ಬೃಹತ್ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿದ್ದು, ಅಂತರಾಷ್ಟ್ರೀಯ ಡ್ರಗ್ ಜಾಲದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಪ್ರೆಸ್ಪಿಜ್ ಫೈನ್ ಬೇರಿ ಪಾರ್ಕ್ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಈ ಅಕ್ರಮ ಚಟುವಟಿಕೆ ಪತ್ತೆಯಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು ಕೇರಳ ಮೂಲದ ಅಶ್ವಿನ್ 1271 ಮತ್ತು ಮೊಬಿನಾ 25) ಎಂಬವರನ್ನು ಬಂಧಿಸಿದ್ದಾರೆ. ಡ್ರಗ್ ಪೆಡ್ಡಿಂಗ್‌ನ್ನೇ ವೃತ್ತಿಯನ್ನಾಗಿಸಿದ್ದ ಆರೋಪಿಗಳು ಯಾವುದೇ ಅನುಮಾನ ಮೂಡದಂತೆ ಐಷಾರಾಮಿ ಅಪಾರ್ಟ್‌ ಮೆಂಟ್‌ನಲ್ಲಿ ವಾಸವಿದ್ದು ಅಕ್ರಮ ವ್ಯವಹಾರ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.

ತನಿಖೆ ವೇಳೆ ಡ್ರಗ್‌ ಜಾಲವು ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಥೈಲ್ಯಾಂಡ್ ಮೂಲದ ವಿನ್ವೆಂಟ್ ಎಂಬಾತ ಈ ಜಾಲದ ಮಾಸ್ಟರ್ ಮೈಂಡ್ ಆಗಿದ್ದು ವಿಮಾನಗಳ ಮೂಲಕ ಹಂತ ಹಂತವಾಗಿ ಡ್ರಗ್ಸ್ ಅನ್ನು ಬೆಂಗಳೂರಿಗೆ ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ. ವಿನ್ಸೆಂಟ್ ನೀಡುತ್ತಿದ್ದ ಸೂಚನೆಗಳ ಆಧಾರದಲ್ಲಿ ಅಶ್ವಿನ್ ಮತ್ತು ಮೊಬಿನಾ ಮಾದಕ ದ್ರವ್ಯಗಳನ್ನು ಸ್ವೀಕರಿಸಿ ಗ್ರಾಹಕರಿಗೆ ತಲುಪಿಸುವ ಕಾರ್ಯ ನಡೆಸುತ್ತಿದ್ದರು.

ಕಾರ್ಯಾಚರಣೆಯಲ್ಲಿ ಪೊಲೀಸರು ಕರ್ನಾಟಕದಲ್ಲೇ ಮೊದಲ ಬಾರಿಗೆ ಭಾರೀ ಪ್ರಮಾಣದ 8,335 LSD ಸ್ಕ್ರಿಸ್ಟ್ ವಶಪಡಿಸಿದ್ದಾರೆ. ಒಂದು ಎಲ್‌ಎಸ್‌ಡಿ ಸ್ವಿಸ್ ಬೆಲೆ ಸುಮಾರು 6,000 ರೂ. ಆಗಿದ್ದು ಇವುಗಳನ್ನು ದೇವತೆಗಳ ಚಿತ್ರಗಳು ಹಾಗೂ ಕಲಾಕೃತಿಗಳ ರೂಪದಲ್ಲಿ ಮುದ್ರಿಸಿ ಯಾರಿಗೂ ಅನುಮಾನ ಬಾರದಂತೆ ಮನ್ನರಾಟ ಮಾಡಲಾಗುತ್ತಿತ್ತು ಇದರ ಜೊತೆಗೆ 534 ಗ್ರಾಂ ಚರಸ್ ಮತ್ತು 5 ಕೆಜಿ ಹೈಡೋ ಗಾಂಜಾವನ್ನೂ ಜಪ್ತಿ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಡ್ರಗ್ ಪಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಕ್ರಮ ವ್ಯವಹಾರಕ್ಕೆ ಬಳಸಲಾದ ಫ್ಲಾಟ್‌ನ ಮಾಲೀಕನ ಪಾತ್ರದ ಬಗ್ಗೆ ಕೂಡ ಸಿಸಿಬಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here