ಮಂಗಳೂರು: ದಮ್ಮಾಮ್ ನಿಂದ ಆಗಮಿಸಿದ ಪ್ರಯಾಣಿಕನಿಂದ ರೂ 58,78,880 ರೂ ಮೌಲ್ಯದ ಚಿನ್ನ ನಗರದ ಏರ್ಪೋರ್ಟ್ ನಿಂದ ವಶಪಡಿಸಿಕೊಳ್ಳಲಾಗಿದೆ. ಸುಮಾರು 812 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮೆಟಲ್ ಡಿಟೆಕ್ಟರ್ ಪರೀಕ್ಷೆಯ ವೇಳೆ ಪ್ರಯಾಣಿಕನಲ್ಲಿ ಸಂದೇಹಾಸ್ಪದ ವಸ್ತುವಿರುವುದು ಪತ್ತೆಯಾಯಿತು. ಆತನ ಸೊಂಟದಿಂದ ಬೀಪ್ ಶಬ್ದ ಹೊರಬಿದ್ದುದರಿಂದ ಹೆಚ್ಚಿನ ತಪಾಸಣೆ ನಡೆಸಲಾಯಿತು. ಈ ವೇಳೆ ಆತನ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದುದು ಪತ್ತೆಯಾಯಿತು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಪಾಸಣೆ ವೇಳೆ 24 ಕ್ಯಾರೆಟ್ ಚಿನ್ನ 812 ಗ್ರಾಂ ಸಿಕ್ಕಿದೆ.