Sunday, July 14, 2024
Homeಅಪರಾಧಬೆಳ್ತಂಗಡಿಯಲ್ಲಿ ಅಕ್ರಮ ಮರಳುಗಾರಿಕೆ; ಪೊಲೀಸ್ ದಾಳಿ: ವಾಹನ, ಸ್ವತ್ತು ವಶಕ್ಕೆ

ಬೆಳ್ತಂಗಡಿಯಲ್ಲಿ ಅಕ್ರಮ ಮರಳುಗಾರಿಕೆ; ಪೊಲೀಸ್ ದಾಳಿ: ವಾಹನ, ಸ್ವತ್ತು ವಶಕ್ಕೆ

ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರಳು ಗಣಿಗಾರಿಕೆ ಮಾಡಲಾಗುತ್ತಿತ್ತು. ಬೆಳ್ಳೂರು ಬಳಿ ನೇತ್ರಾವತಿ ನದಿಯಿಂದ ಕಳ್ಳತನ ಮಾಡಿ ಮರಳು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇಂದಬೆಟ್ಟು ನಿವಾಸಿಗಳಾದ ಡೀಕಯ್ಯ ಮತ್ತು ರಿಯಾಜ್ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ದಾಳಿಯ ವೇಳೆ ಗೊತ್ತಾಗಿದೆ. ಪಿಕಪ್ ಮೂಲಕ ಮರಳು ಸಾಗಾಟ ಮಾಡಲು ಯತ್ನಿಸಿರುವುದು ಗೊತ್ತಾಗಿದೆದ. ವಾಹನ ಮತ್ತು ಇತರ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕ ಮುರಳೀಧರ್ ಕೆ ಜಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular