Tuesday, January 14, 2025
HomeUncategorizedಚೇಳೈರು ನಂದಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ

ಚೇಳೈರು ನಂದಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ


ಚೇಳೈರು ಹಳೆಯಂಗಡಿ ಗ್ರಾಮ ಪಂಚಾಯತ್ ಒಳಪಟ್ಟ ನಂದಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಸರಕಾರದ ಬೊಕ್ಕಸಕ್ಕೆ ರಾಜಸ್ವ ನಷ್ಟವಾಗಿದೆ ಬಾಹ್ಯ ಶಕ್ತಿಗಳನ್ನೊಳಗೊಂಡ ಈ ದಂದೆ ಸ್ಥಳೀಯರ ನಿದ್ದೆಗೆಡಿಸಿದೆ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಮರಳುಗಾರಕೆ ನಡೆಯುತ್ತಿದೆ ಇಷ್ಟಾದರೂ ಸಂಬಂಧಿಸಿದ ಇಲಾಖೆ ಮೌನವಹಿಸಿರುವುದು ಅಕ್ರಮಕ್ಕೆ ಪರೋಕ್ಷ ಬೆಂಬಲ ನೀಡಿದಂತಿದೆ ಕಾನೂನು ಪ್ರಕಾರ ಅಣೆಕಟ್ಟಿನ 500 ಮೀಟರ್ ದೂರದಿಂದ ಮರಳು ತೆಗೆಯಲು ಅವಕಾಶವಿರುವುದು ಆದರೆ ಇಲ್ಲಿ ಅಕ್ರಮವಾಗಿ ಚೇಳೈರು ನಂದಿನಿ ಅಣೆಕಟ್ಟಿನ ಅಡಿಭಾಗದಿಂದ ತುಂಬಾ ಆಳಕ್ಕೆ ಮರಳನ್ನು ದೋಣಿಯಲ್ಲಿ ತೆಗೆಯುವುದರಿಂದ ಅಣೆಕಟ್ಟಿನ ಪಿಲ್ಲರುಗಳು ಬಿರುಕು ಬಿಟ್ಟಿದೆ ಮುಂದೆ ಅಣೆಕಟ್ಟು ಬೀಳುವ ಸ್ಥಿತಿ ಇದೆ ಮರಳುಗಾರಿಕೆ ನಡೆಯುವ ಜಾಗ ಹಳೆಯಂಗಡಿ ಗ್ರಾಮ ಪಂಚಾಯತ್ ಸೇರಿದ್ದು ಅಣೆಕಟ್ಟು ಇರುವ ಭಾಗ ಚೇಳೈರು ಗ್ರಾಮ ಪಂಚಾಯತ್ ಗೆ ಸೇರಿದ್ದಾಗಿದೆ
*ಮರಳು ಗಾರಿಕೆ ನಡೆಯುವ ಬಗ್ಗೆ ನನಗೆ ಗ್ರಾಮಸ್ಥರು ದೂರು ನೀಡಿದ ಕೂಡಲೇ‌ ಸ್ಥಳಕ್ಕೆ ಹೋಗಿ ಮರಳುಗಾರಿಕೆ ನಿಲ್ಲಿಸುತ್ತೇವೆ ಅದರೆ ತಡ ರಾತ್ರಿ ಮರಳುಗಾರಿಕೆ ನಡೆಯುವ ಕಾರಣ ನಮಗೆ ಮಾಹಿತಿ ದೊರೆಯುವುದಿಲ್ಲ ಗ್ರಾಮಸ್ಥರು ಸರಿಯಾದ ಸಮಯಕ್ಕೆ ಮಾಹಿತಿ ಮತ್ತು ಸಹಕಾರ ನೀಡಿದಲ್ಲಿ ಮರಳು ಗಾರಿಕೆ ನಿಲ್ಲಿಸಬಹುದು ಪ್ರಸ್ತುತ ಈಗ ಮರಳುಗಾರಿಕೆ ನಡೆಯುವುದು ಹಳೆಯಂಗಡಿ ಗ್ರಾಮ ಪಂಚಾಯತ್ ಗೆ ಸೇರಿದ ಜಾಗದಲ್ಲಿ ಚೇಳೈರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ಅಕ್ರಮ ಮರಳುಗಾರಿಕೆ ಬಗ್ಗೆ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದೇವೆ ಅಣೆಕಟ್ಟಿನ ಅಡಿಭಾಗ ಬಿರುಕು ಬಿಟ್ಟಿರುವ ಬಗ್ಗೆ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಗಮನಕ್ಕೆ ತರಲಾಗುವುದು ಜಯಾನಂದ ಚೇಳೈರು ಅಧ್ಯಕ್ಷರು ಗ್ರಾಮ ಪಂಚಾಯತ್ ಚೇಳೈರುನವೆಂಬರ್ ತಿಂಗಳಲ್ಲಿ ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಣೆಕಟ್ಟಿನ ಬಾಗಿಲನ್ನು ಹಾಕಬೇಕಾಗಿತ್ತು ಸರಿಯಾದ ಸಮಯಕ್ಕೆ ಹಾಕದ ಕಾರಣ ಉಪ್ಪು ನೀರಿನ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆಯಾಗಿದೆ ಹಾಗೂ ಕೃಷಿಕರಿಗೆ ತುಂಬಾ ಸಮಸ್ಯೆ ಯಾಗಿದೆ ಹಾಗಾಗಿ ಅಣೆಕಟ್ಟಿನ ಬಾಗಿಲು ಹಾಕುವ ಕೆಲಸ ಸಮಯಕ್ಕೆ ಸರಿಯಾಗಿ ಅಗಬೇಕು ಇದಕ್ಕೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು. ಸುಧಾಕರ ಶೆಟ್ಟಿ ಖಂಡಿಗೆ ಸದಸ್ಯರು ಚೇಳೈರು ಗ್ರಾಮ ಪಂಚಾಯತ್ ಚೇಳೈರು ನಂದಿನಿ ನದಿಯ ಅಣೆಕಟ್ಟಿನ ಬಾಗಿಲನ್ನು ಹಾಕಿದರು. ಅಕ್ರಮ ಮರಳುಗಾರಿಕೆಯವರು ರಾತ್ರಿ ಹೊತ್ತು ಅಣೆಕಟ್ಟಿನ ಬಾಗಿಲು ತೆಗದು ಮರಳು ತೆಗೆಯುವುದರಿಂದ ಉಪ್ಪು ನೀರಿನ ಸಮಸ್ಯೆ ಉಂಟಾಗಿದೆ ಹಾಗಾಗಿ ಕುಡಿಯುವ ನೀರು ಉಪ್ಪು ಆಗಿರುವುದರಿಂದ ಬಹಳಷ್ಟು ನೀರಿನ ಸಮಸ್ಯೆ ಯಾಗಿದೆ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಪಂಚಾಯತ್ ತಮ್ಮ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಂಡರು ಇತರ ಇಲಾಖೆಗಳ ಅಸಡ್ಡೆಯಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ ಮುಂದೆ ಇದನ್ನು ಸರಿಪಡಿಸಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular