Thursday, May 1, 2025
Homeಅಪರಾಧಮಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆ ಪತ್ತೆ

ಮಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆ ಪತ್ತೆ

ಸುರತ್ಕಲ್: ಭಾರೀ ಅಕ್ರಮ ಕಸಾಯಿಖಾನೆಯೊಂದು ಪತ್ತೆಯಾಗಿದ್ದು, ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಘಟನೆ ಸುರತ್ಕಲ್ ನ ಕೃಷ್ಣಾಪುರ 8ನೇ ಬ್ಲಾಕ್ ಬಳಿ ನಡೆದಿದೆ.ವಿಶ್ವ ಹಿಂದೂ ಪರಿಷತ್, ಬಜರಂಗದಳ ಸುರತ್ಕಲ್ ಪ್ರಖಂಡ ನೀಡಿದ ಮಾಹಿತಿಯಂತೆ ಕೃಷ್ಣಾಪುರ ಪರಿಸರದ ಒಂದು ಮನೆಯಲ್ಲಿ ದಾಳಿ ನಡೆಸಿದಾಗ 16ಗೋವುಗಳ ಸಹಿತ ಕೆ.ಜಿ.ಗಟ್ಟಲೆ ದನದ ಮಾಂಸ ಪತ್ತೆಯಾಗಿದೆ. ಸುಸಜ್ಜಿತ ಕಾಂಕ್ರೀಟ್ ಮನೆಯೊಂದರಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸವನ್ನಾಗಿ ಪರಿವರ್ತಿಸಿ ಸ್ಥಳೀಯ ಹೋಟೆಲ್ ಸಹಿತ ವಿವಿಧೆಡೆ ಸರಬರಾಜು ಮಾಡಲಾಗುತ್ತಿತ್ತು. ಪೊಲೀಸರ ದಾಳಿಯ ವೇಳೆ 16ಕ್ಕೂ ಅಧಿಕ ಗೋವುಗಳು ಪತ್ತೆಯಾಗಿದ್ದು, ಎಲ್ಲವನ್ನೂ ರಕ್ಷಿಸಲಾಗಿದೆ.

ಬಜರಂಗದಳ ಕಾರ್ಯಕರ್ತರು ಮತ್ತು ಸುರತ್ಕಲ್ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ದನಗಳನ್ನು ರಕ್ಷಿಸಲಾಗಿದೆ ಹಾಗೂ ದನದ ಮಾಂಸದ ವಾಹನವನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular