Saturday, April 19, 2025
Homeಮಂಗಳೂರುಸಿನಿಮೀಯ ರೀತಿಯಲ್ಲಿ ಅಕ್ರಮ ಗೋವುಗಳ ಸಾಗಾಟ : ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ

ಸಿನಿಮೀಯ ರೀತಿಯಲ್ಲಿ ಅಕ್ರಮ ಗೋವುಗಳ ಸಾಗಾಟ : ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ


ಮೂಡುಬಿದಿರೆ: ಅಕ್ರಮವಾಗಿ ಗೋವುಗಳನ್ನ ಸಾಗಾಟ ಮಾಡುತ್ತಿದ್ದ ಹಿನ್ನೆಲೆ ಪಿಕಪ್ ವಾಹನದಲ್ಲಿದ್ದ 19 ಗೋವುಗಳನ್ನ ರಕ್ಷಣೆ ಮಾಡಲಾಗಿದೆ. ಸಿನಿಮೀಯ ರೀತಿಯಲ್ಲಿ ಗೋಕಳ್ಳತನದ ವಾಹನವನ್ನು ಬೆನ್ನಟ್ಟಿ ಹಿಡಿದು ಅಮಾನುಷವಾಗಿ ಗೋವುಗಳ ಕೈಕಾಲು ಕಟ್ಟಿ ಹಾಕಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಗೋವುಗಳನ್ನು ಗುರುಪುರ ಪ್ರಖಂಡದ ಬಜರಂಗದಳದ ಕಾರ್ಯಕರ್ತರು ಸುರಲ್ಪಾಡಿ ಮಸೀದಿಯ ಮುಂಭಾಗದಲ್ಲಿ ತಡೆದು ನಿಲ್ಲಿಸಿದ್ದಾರೆ.
ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಜರಂಗದಳ ಕಾರ್ಯಕರ್ತರು ವಾಹನ ಚೇಸಿಂಗ್ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನ ಸಾಗಿಸುತ್ತಿದ್ದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮೂಡುಬಿದರೆಯಿಂದ ಮಂಗಳೂರು ಕಡೆ ಪಿಕಪ್ ವಾಹನ ಬರುತ್ತಿತ್ತು. ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟದ ಬಗ್ಗೆ ಮಾಹಿತಿ ಬಂದಿದೆ.

ಈ ವೇಳೆ ಬಜರಂಗದಳ ಕಾರ್ಯಕರ್ತರು ವಿಷಯ ಆಧರಿಸಿ ಕಾರಿನಲ್ಲಿ ವಾಹನ ಬೆನ್ನಟ್ಟಿದ್ದಾರೆ. ಸೂರಲ್ಪಾಡಿ ಬಳಿ ಪಿಕಪ್ ವಾಹನವನ್ನು ತಡೆದಿದ್ದಾರೆ. ಈ ವೇಳೆ ಪಿಕಪ್ ವಾಹನದಲ್ಲಿದೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಬಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ವಾಹನದಲ್ಲಿದ್ದ ಮೂವರು ದನಕಳ್ಳರು ತಪ್ಪಿಸಿಕೊಂಡು ಓಡಿಹೋಗಿದ್ದು, ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular