ಮಂಗಳೂರು: ತುಳು ಜನಪದ ವಿದ್ವಾಂಸ, ಕವಿ, ಲೇಖಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ. ವಾಮನ ನಂದಾವರರು ದಿನಾಂಕ 15.03.2025 ರಂದು ನಿಧನರಾಗಿದ್ದಾರೆ. ಈ ಹಿನ್ನಲೆಯಲ್ಲಿ ದಿನಾಂಕ 28.03.2025 ರಂದು ಮಂಗಳೂರಿನ ಬಲ್ಲಾಳ್‌ಬಾಗ್‌ನಲ್ಲಿರುವ ‘ಪತ್ತುಮುಡಿ ಸೌಧ’ ದಲ್ಲಿ ಬೆಳಗ್ಗೆ 10.30 ರಿಂದ ಶ್ರೀ ರಾಘವೇಂದ್ರ ಬೀಜಾಡಿ ಹಾಗೂ ತಂಡದವರಿಂದ ನಡೆಯುವ ಭಾವಗೀತಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಡಾ. ವಾಮನ ನಂದಾವರರ ಶಿಷ್ಯರೂ, ಅಭಿಮಾನಿಗಳು ಭಾಗವಹಿಸಬೇಕೆಂದು
ಚಂದ್ರಕಲಾ ನಂದಾವರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.