ಮೂಡುಬಿದಿರೆ:- ಸ್ಥಳೀಯ ತಾಲೂಕು ಕಛೇರಿಯಲ್ಲಿ ಕಛೇರಿಯ ಸಿಬ್ಬಂದಿಗಳು ಒಟ್ಟು ಸೇರಿ ಸರಕಾರದ ಸೂಚನೆಯಂತೆ ಮಡಿವಾಳ ಮಾಚಿದೇವರ ಸ್ಮರಣೆಯನ್ನು ಫೆಬ್ರವರಿ 1 ರಂದು ಮಾಡಿದರು. ತಾಲೂಕು ಕಛೇರಿಯ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಿವಶರಣರ ಕಾಯಕ ಮಾಡುತ್ತ ಬಸವಣ್ಣನವರ ಕಾಯಕವೇ ಕೈಲಾಸದಂತೆ ಬದುಕಿದ ಮಾಚಿದೇವರನ್ನು ವೇದಿಕೆಯಲ್ಲಿ ಹಾಜರಿದ್ದ ಶ್ರೀಧರ, ಅಧ್ಯಕ್ಷ ಗಣೇಶ, ಗೌರವ ಸಲಹೆಗಾರ ಶಂಕರ್ ರವರು ಸ್ಮರಿಸಿದರು. ಉಪ ತಹಸೀಲ್ದಾರ್ ರಾಮ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ಮಡಿವಾಳ ಮಾಚಿದೇವ ಸ್ಮರಣೆ
RELATED ARTICLES