ಸುವರ್ಣ ಸಂಭ್ರಮ ಕರ್ನಾಟಕ 50ರ ಪ್ರಯುಕ್ತ ನಡೆಯುವ ಬಹು ಸಂಸ್ಕೃತಿ ಉತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ನವೆಂಬರ್ 13ರಂದು ಬೆಳಿಗ್ಗೆ 10.30ಕ್ಕೆ ಅಮೃತ ಸೋಮೇಶ್ವರ ಸಭಾಂಗಣದ ತುಳು ಭವನ ಉರ್ವಾಸ್ಟೋರ್, ಮಂಗಳೂರಿನಲ್ಲಿ ನಡೆಯಲಿದೆ .
ಕಾರ್ಯಕ್ರಮದ ಉದ್ಘಾಟನೆಯನ್ನು ಸಂತೋಷ್ ಕುಮಾರ್ (ಅಪರ ಜಿಲ್ಲಾಧಿಕಾರಿಗಳು, ದ.ಕ. ಜಿಲ್ಲೆ) ನಡೆಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸುಮಂಗಳಾ ಎಸ್. ನಾಯಕ್ (ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ, ದ.ಕ. ಜಿಲ್ಲೆ) ಕೋಟಿ ಪ್ರಸಾದ್ ಆಳ್ವಾ (ನಿರ್ದೇಶಕರು, ಪ್ರಸಾದ್ ಆರ್ಟ್ ಗ್ಯಾಲರಿ) ಗಣೇಶ್ ಸೋಮಾಯಾಜಿ (ಹಿರಿಯ ಕಲಾವಿದರು) ಬಾಲಕೃಷ್ಣ ಶೆಟ್ಟಿ (ಅಧ್ಯಕ್ಷರು, ಚಿತ್ರಕಲಾ ಶಿಕ್ಷಕರ ಸಂಘ ದ.ಕ.ಜಿಲ್ಲೆ) ಎನ್.ಎಸ್. ಪತ್ತಾರ್ (ವಿಭಾಗ ಮುಖ್ಯಸ್ಥರು, ಮಹಾಲಸಾ ಚಿತ್ರಕಲಾ ಶಿಕ್ಷಣ ಸಂಸ್ಥೆ) ಹರೀಶ್ ಕೊಡಿಯಾಲ್ ಬೈಲ್ (ಟ್ರಸ್ಟಿ, ಆರ್ಟ್ ಕೆನರಾ ಟ್ರಸ್ಟ್) ಭಾಗವಹಿಸಲಿದ್ದಾರೆ.