Thursday, May 1, 2025
Homeಬೆಂಗಳೂರುನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ

ಬೆಂಗಳೂರು: ಭಾರತೀಯ ಭಾಷಾ ಅಭಿಯಾನ, ಕರ್ನಾಟಕ ವತಿಯಿಂದ ರಾಜ್ಯದ ನ್ಯಾಯಾಂಗದಲ್ಲಿ ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನಕ್ಕಾಗಿ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಹೈಕೋರ್ಟ್ ನ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮಾತನಾಡಿ,ರಾಜ್ಯದ ಹೈಕೋರ್ಟ್ ಸೇರಿದಂತೆ ಬೇರೆ ನ್ಯಾಯಾಲಯಗಳಲ್ಲಿ 17ಸಾವಿರ ಪ್ರಕರಣಗಳು ಆನ್ ಲೈನ್ ಮೂಲಕ ಕನ್ನಡದಲ್ಲಿ ತೀರ್ಪು ಬಂದಿವೆ. ಕನ್ನಡದಲ್ಲಿ ಹೈಕೋರ್ಟ್ ಸೇರಿದಂತೆ ಕೆಳ ನ್ಯಾಯಾಲಯದ ವರೆಗೆ ತೀರ್ಪುಗಳು ಕನ್ನಡದಲ್ಲಿ ಬರುವ ಅಗತ್ಯವಿದೆ ಎಂದು ಹೇಳಿದರು.

ಹೈಕೋರ್ಟ್ ನ ನ್ಯಾಯಮೂರ್ತಿ ಆರ್ .ದೇವದಾಸ್ ಮಾತನಾಡಿ, ಈ ದೇಶದಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯಾಲಯಗಳಲ್ಲಿ ತೀರ್ಪುಗಳ ವಾದ,ಪ್ರತಿವಾದಗಳು ನಡೆಯಬೇಕಾದರೆ ಕೇಂದ್ರ ಸರ್ಕಾರ ಇಲ್ಲವೇ ಸುಪ್ರೀಂಕೋರ್ಟ್ ನಿಂದ ಗೆಜೆಟ್ ನೋಟಿಫಿಕೇಶನ್ ಹೊರಡಿಸುವುದು ಅಗತ್ಯವಾಗಿದೆ ಜತೆಗೆ ಇಂದಿನ ಪೀಳಿಗೆಯ ವಕೀಲರು ಇಂಗ್ಲಿಷ್ ವ್ಯಾಮೋಹ ವ್ಯವಹಾರ ಕೈ ಬಿಟ್ಟು ಆಯಾ ಪ್ರಾದೇಶಿಕ ಭಾಷೆಯಲ್ಲಿ ವಾದ ನಡೆಸಿದರೆ ಕನ್ನಡ ಭಾಷೆ ನ್ಯಾಯಾಲಯದಲ್ಲಿ ಬಳಕೆಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಸಂಯೋಜಕ, ನಿರೂಪಕ ವಕೀಲ ಅನಿಲ್ ರೆಡ್ಡಿ ಮಾತನಾಡಿ,ಇಡೀ ದೇಶದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ನ್ಯಾಯಾಲಯ ವ್ಯವಹಾರಗಳು, ವಾದ ಪ್ರತಿವಾದಗಳು ನಡೆಯಬೇಕೆಂಬ ಉದ್ದೇಶದಿಂದ ಕನ್ನಡ ಭಾಷೆ ನ್ಯಾಯಾಂಗದಲ್ಲಿ ಅನುಷ್ಠಾನ ಕುರಿತು ವಿಚಾರ ಸಂಕಿರಣ, ಅಭಿಯಾನ ಹಮ್ಮಿಕೊಳ್ಳಲಾಗಿದೆ, ಇದು ಮುಂದುವರೆಯಲಿದೆ ಎಂದು ಹೇಳಿದರು.

ವಿನೋದ್ ಎ.ರಾಷ್ಟ್ರೀಯ ಸಂಯೋಜಕರು, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಹಿರಿಯ ವಕೀಲ ಸಿ.ಆರ್.ಗೋಪಾಲ ಸ್ವಾಮಿ,ಎಸ್.ಸುಶೀಲಾ,ರಾಜ್ಯ ವಕೀಲ ಪರಿಷತ್ ನ ಅಧ್ಯಕ್ಷ ಎಸ್.ಎಸ್.ಮಿಟ್ಟಲ್ ಕೋಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಾಹಿತ್ಯ ಕೂಟ ಅಧ್ಯಕ್ಷ ಮಂಜುನಾಥ್ ಬಿ.ಗೌಡ,ಬೆಂಗಳೂರು ವಕೀಲರ ಸಾಹಿತ್ಯ ಕೂಟದ ನಿಕಟಪೂರ್ವ ಅಧ್ಯಕ್ಷ ಎಲ್.ಜಗದೀಶ್ ಮತ್ತಿತರರು ಭಾಗವಹಿಸಿ ನ್ಯಾಯಾಂಗದಲ್ಲಿ ಕನ್ನಡ ಅನುಷ್ಠಾನ ಕುರಿತು ವಿಷಯ ಮಂಡಿಸಿದರು. ನ್ಯಾಯವಾದಿ ರೇಣುಕಾ ದೇವಿ ಪಾಟೀಲ್ ವಂದನಾರ್ಪಣೆ ಮಾಡಿದರು.

RELATED ARTICLES
- Advertisment -
Google search engine

Most Popular