26.6 C
Udupi
Tuesday, November 29, 2022
spot_img

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ

  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ  ಪಶ್ಚಿಮ  ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ದಿನಾಂಕ 13-11-2022ನೇ ಭಾನುವಾರದಂದು ಸಂಜೆ 4:30ಕ್ಕೆ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್, ಎಮ್ಮೆಕೆರೆ ಪಾಂಡೇಶ್ವರ ಮಂಗಳೂರು ಇಲ್ಲಿ ಜರುಗಿತು.

  ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪರಮೇಶ್ವರ ಎ. ಹೆಗ್ಡೆ, ಉಪ ಪೊಲೀಸ್ ಆಯುಕ್ತರು, ಮಂಗಳೂರು ಸೆಂಟ್ರಲ್, ಇವರು ನೆರವೇರಿಸಿ ಮಾತನಾಡಿ, ಮಾನಸಿಕ ಒತ್ತಡದಿಂದಾಗಿ ದೇಹಕ್ಕೆ ಹೆಚ್ಚಿನ ರೋಗಗಳು ಬರುತ್ತದೆ ಇಂತಹ ಕ್ರೀಡಾಕೂಟಗಳಿಂದ ಮಾನಸಿಕ ಒತ್ತಡ ಕಡಿಮೆ ಆಗಿ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ಗೃಹರಕ್ಷಕದಳದಲ್ಲಿ ಬೇರೆ ಬೇರೆ ವೃತ್ತಿಯಲಿರುವವರಿದ್ದು, ಇವರೆಲ್ಲರಿಗೂ ದೈಹಿಕ ಹಾಗೂ ಮಾನಸಿಕ ದೃಢತೆಗಾಗಿ ಕ್ರೀಡೆ ಅವಶ್ಯಕ ಎಂದು ನುಡಿದರು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕರು ಉತ್ತಮ ಆಟ ಆಡಿ ಜಿಲ್ಲೆಯ ಘಟನತೆಯನ್ನು ಹೆಚ್ಚಿಸಿ ಎಂದು ನುಡಿದರು

  ಗೌರವ ಉಪಸ್ಥಿತರಾಗಿ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್ ಎಮ್ಮೆಕೆರೆ ಇದರ ನಿರ್ದೇಶಕರಾದ ಶ್ರೀ ಪರೀಕ್ಷಿತ್ ರೈ ಉಪಸ್ಥಿತರಿದ್ದರು.    

ಶ್ರೀ ರಮೇಶ್ ಉಪ ಸಮಾದೇಷ್ಟರು ಸ್ವಾಗತ ಭಾಷಣ ಮಾಡಿದರು. ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ,ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಭಾಸ್ಕರ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು

Related Articles

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles