ಉಡುಪಿ: ಉಡುಪಿಯ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್ (ಎಸಿಸಿಇಎ) ನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಶನಿವಾರ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್‌ನಲ್ಲಿ ನಡೆಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ನಿಟ್ಟೆ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಗೋಪಾಲ್ ಮುಗೇರಾಯ ಮುಂಡ್ಕೊರ್ ಮತ್ತು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯೋಗೀಶ್ ಚಂದ್ರಾ ಧಾರರಿಗೆ ಪ್ರತಿಜ್ಞಾ ವಿಧಿ ಮಾಡಲಾಯಿತು. ಸಮಾರಂಭದಲ್ಲಿ ಮಣಿಪಾಲ ಎಂ.ಐ.ಟಿ. ಅಸಿಸ್ಟೆಂಟ್ ಪ್ರೊಫೆಸರ್ ಹೆಚ್ ಕೆ ಸುಗಂಧಿನಿ ಹಾಗೂ ಯು ಕೆ ರಾಘವೇಂದ್ರ ರಾವ್, ರಮೇಶ್ ರಾವ್, ನಾರಾಯಣ ಮೂರ್ತಿ, ದಿವಾಕರ್ ರಾವ್ ಮತ್ತು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು. ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್ ನ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ನೂತನ ಕಾರ್ಯದರ್ಶಿ ಮಹೇಶ್ ಕಾಮತ್, ನೂತನ ಖಂಚಾಚಿ ಅಮಿತ್ ಅರವಿಂದ್ ನಾಯಕ್ ಮತ್ತು ಸಮಿತಿಯ ಪಧಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭವನ್ನು ಪಾಂಡುರಂಗ ಆಚಾರ್ಯ ಸ್ವಾಗತಿಸಿದರು. ಭಗವಾನ್ ದಾಸ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಮಹೇಶ್ ಕಾಮತ್ ವಂದಿಸಿದರು. ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಮೂಲ್ಕಿ, ಬ್ರಹ್ಮಾವರ ವಲಯದ ಸದಸ್ಯರು ಸಹ ಉಪಸ್ಥಿತರಿದ್ದರು, ಸಂಘದ ಸದಸ್ಯರಾದ ರಾಜೇಶ್ ಶೇಟ್, ದಯಾನಂದ್, ಶಂಕರ್ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.