ಸಜೀಪ ಮಾಗಣೆ ಶ್ರೀ ನಡಿಯೇಳು ದೈವಂಗಳು ಶ್ರೀ ಉಳ್ಳಾಲ್ದಿ ಶ್ರೀ ನಾಲ್ಕೈತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತ ಮಜಲು ಪುನರ್ ನಿರ್ಮಾಣಗೊಂಡ 3 ಗೋಪುರಗಳ ಲೋಕಾರ್ಪಣೆ ಏಪ್ರಿಲ್ ಎರಡು ಹಾಗೂ ಮೂರರಂದು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಿಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದ್ದು ಇದರ ಪೂರ್ವಭಾವಿ ಸಿದ್ಧತಾ ಸಭೆಯು ಭಾನುವಾರದಂದು ಶ್ರೀ ಕ್ಷೇತ್ರದಲ್ಲಿ ಜರಗಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ಮಾತನಾಡಿ ಡೈವರಾದನೆಯಲ್ಲಿ ವೈಶಿಷ್ಟ್ಯತೆಯನ್ನು ಹೊಂದಿರುವ ಕ್ಷೇತ್ರ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನವ ನಿರ್ಮಾಣಗೊಂಡು ತತ್ಸಂಬಂಧವಾಗಿ ಜರಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾಗಣೆಯ ಎಲ್ಲಾ ಭಕ್ತರು ಪಾಲ್ಗೊಂಡು ಹಲವು ಶತಮಾನಗಳಿಗೊಮ್ಮೆ ದೊರೆಯುವ ಇಂತಹ ಪುಣ್ಯ ಕಾರ್ಯದಲ್ಲಿ ಎಲ್ಲರೂ ತನುಮನ ದನಗಳಿಂದ ಸಹಕರಿಸುವಂತೆ ವಿನಂತಿಸಿದರು ಗೌರವಾಧ್ಯಕ್ಷರಾದಂತಹ ವಿವೇಕ್ ಶೆಟ್ಟಿ ನಗ್ರೀಗುತ್ತು ಮಾತನಾಡಿ ಕ್ಷೇತ್ರದ ಅಭಿವೃದ್ಧಿಯ ಎಲ್ಲಾ ಕೆಲಸ ಕಾರ್ಯಗಳು ಸಾಕಾರಗೊಳ್ಳುವಲ್ಲಿ ಎಲ್ಲಾ ಭಕ್ತರು ಕೈಜೋಡಿಸುವಂತೆ ವಿನಂತಿಸಿದರು ಬಂಟ್ವಾಳ ತಾಲೂಕು ನೌಕರ ಸಂಘದ ಅಧ್ಯಕ್ಷ ಕೆ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ವೇದಿಕೆಯಲ್ಲಿ ಜಯ ಶಂಕರ ಬಾಸ್ರಿ ತಾಯ ಸತೀಶ್ ಪೆರ್ಗಡೇ ಕಾಂತಾಡಿ ಗುತ್ತು ಎಸ್ ಶ್ರೀಕಾಂತ್ ಶೆಟ್ಟಿ ದೇವಿ ಪ್ರಸಾದ್ ಪೂoಜ ರತ್ನಾಕರ ನಾಡರು ಉಪಸ್ಥಿತರಿದ್ದರು. ಮಾಗಣೆಯ ಸಾಂಸ್ಕೃತಿಕ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಿದರು.