Saturday, February 15, 2025
Homeಮಂಗಳೂರುಅಕ್ಷಯಪಾತ್ರ ಪ್ರತಿಷ್ಠಾನ ತ್ಯಾಜ್ಯ ನೀರಿನ ಸಂಸ್ಕರಣಾ ನೂತನ ಘಟಕದ ಉದ್ಘಾಟನೆ (ಹಸಿರು ಸಂಕಲ್ಪ)

ಅಕ್ಷಯಪಾತ್ರ ಪ್ರತಿಷ್ಠಾನ ತ್ಯಾಜ್ಯ ನೀರಿನ ಸಂಸ್ಕರಣಾ ನೂತನ ಘಟಕದ ಉದ್ಘಾಟನೆ (ಹಸಿರು ಸಂಕಲ್ಪ)

ಶೈಕ್ಷಣಿಕ ಮತ್ತು ಸಾಂಸ್ಕೃತಿಕ ನೂತನ ಕೇಂದ್ರಕ್ಕೆಇಟ್ಟಿಗೆ ಸಮರ್ಪಣೆ (ಸಮರ್ಪಣ್)

ಮಂಗಳೂರು ಜ. 29 :“ನಗರದಇಸ್ಕಾನ್ ಸಂಸ್ಥೆಯ ಸಹ ಸಂಸ್ಥೆಯಾದಅಕ್ಷಯಪಾತ್ರ ಪ್ರತಿಷ್ಠಾನದ ಸಂಸ್ಥೆಯು ದಿನಂಪ್ರತಿಜಿಲ್ಲೆಯ 190 ಸರ್ಕಾರಿ ಶಾಲೆಯ20,000ವಿದ್ಯಾರ್ಥಿಗಳಿಗೆ ಬಿಸಿಯೂಟ ಸರಬರಾಜು ಮಾಡುವಕಾರ್ಯ ಭಗವಂತನು ಮೆಚ್ಚುವ ಸತ್ಕಾರ್ಯ” ಎಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅವರು ತಾ.೨೮.೦೧.೨೦೨೫ ರಂದು ಬೆಂಜನಪದವುಅಕ್ಷಯಪಾತ್ರ ಪ್ರತಿಷ್ಠಾನದಆವರಣದಲ್ಲಿಜರಗಿದ ಹಸಿರು ಸಂಕಲ್ಪ ಮತ್ತು ಸಮರ್ಪಣ್‌ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡುತಮ್ಮಅಭಿಪ್ರಾಯ ವ್ಯಕ್ತಪಡಿಸಿದರು.ಇಸ್ಕಾನ್ ಸಂಸ್ಥೆಯಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಮಾಜ ಸೇವಾ ಕಾರ್ಯ ಶ್ಲಾಘನೀಯಎಂದು ನುಡಿದುಅದು ಮಾತ್ರವಲ್ಲದೆ ಋಷಿ ವೃತ್ತಿ ಮತ್ತು ಕೃಷಿ ವೃತ್ತಿಗೆ ಪ್ರಾಮುಖ್ಯತೆ ನೀಡಿದೆಎಂದುಸAತಸ ವ್ಯಕ್ತ ಪಡಿಸಿದರು.
ಇಸ್ಕಾನ್ ಸಂಸ್ಥೆಯಅಧ್ಯಕ್ಷರಾದ ಶ್ರೀ ಗುಣಾಕರರಾಮದಾಸರವರುತಮ್ಮಅಧ್ಯಕ್ಷೀಯ ಭಾಷಣದಲ್ಲಿಅಕ್ಷಯ ಪಾತ್ರ ಪ್ರತಿಷ್ಠಾನದಆವರಣದಲ್ಲಿ ಸುಮಾರು ೧.೦೦ ಕೋಟಿ ಮೌಲ್ಯದ ದಿನಂಪ್ರತಿ ೫೦,೦೦೦ ಲೀಟರ್ ಸಾಮರ್ಥ್ಯವುಳ್ಳ ತ್ಯಾಜ್ಯ ನೀರಿನ ಸಂಸ್ಕರಣಾಘಟಕವನ್ನು (ಹಸಿರು ಸಂಕಲ್ಪ) ನೂತನವಾಗಿಆರಂಭಿಸಲಾಗಿದೆ ಮತ್ತುಅದರ ಶುದ್ಧೀಕರಿಸಿದ ನೀರನ್ನುಸ್ವಚ್ಛ ಭಾರತ್ ಹಾಗೂ ಹಸಿರು ಕ್ರಾಂತಿಯಅಭಿಯಾನವಾಗಿಗಿಡ, ಮರ, ಗದ್ದೆಗಳಿಗೆ ಸರಬರಾಜು ಮಾಡಲಾಗುವುದುಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿಶೈಕ್ಷಣಿಕ ಮತ್ತುಕೌಶಲ್ಯಅಭಿಯಾನದ ಅಂಗವಾಗಿ ಇಸ್ಕಾನ್ ಸಂಸ್ಥೆಯಗೋವರ್ಧನಗಿರಿನೂತನ ಶೈಕ್ಷಣಿಕ ಮತ್ತು ಸಾಂಸ್ಕೃತಿಕಕೇAದ್ರಕ್ಕೆಕಟ್ಟಡಕ್ಕೆ (ಸಮರ್ಪಣ್) ಇಟ್ಟಿಗೆಗಳನ್ನು ಪೂಜಿಸಿ ಸಮರ್ಪಿಸಲಾಯಿತು. ಈ ಕಾರ್ಯಕ್ರಮದ ಸವಿನೆನಪಿಗಾಗಿ ಹಾಗೂ ಸಂಸ್ಥೆಯ ಸಮಾಜ ಸೇವಾ ಅಂಗವಾಗಿ ಅಡ್ಡೂರುದ.ಕ. ಜಿಲ್ಲಾ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ವೇದಿಕೆಯಲ್ಲಿ ಕಾಪು ಕ್ಷೇತ್ರದ ಶಾಸಕ ಜಿ. ಸುರೇಶ್ ಶೆಟ್ಟಿ, ಆಭರಣಜ್ಯುವೆಲ್ರ‍್ಸ್ ಆಡಳಿತ ನಿರ್ದೇಶಕ ಪ್ರತಾಪ್ ಮಧುಕರ್‌ಕಾಮತ್, ಚಿತ್ತಾರಗೇರುಬೀಜ ಸಂಸ್ಥೆಯ ಆಡಳಿತ ನಿರ್ದೇಶಕ ಗೋಪಿನಾಥಕಾಮತ್, ಅದಾನಿ ಸಮೂಹ ಸಂಸ್ಥೆಯಕಾರ್ಯನಿರ್ವಾಹಕ ನಿರ್ದೇಶಕರಾದಕಿಶೋರ್ ಆಳ್ವ, ಎಂ.ಆರ್.ಪಿ.ಎಲ್. ಸಂಸ್ಥೆಯ ಮಹಾಪ್ರಬಂಧಕ ಪ್ರಶಾಂತ್ ಬಾಳಿಗ, ಆಳ್ವಾಸ್ ಮೂಡಬಿದ್ರೆ ಸಂಸ್ಥೆಯ ವಿವೇಕ ಆಳ್ವ, ಆಲಿಗ್ರೋ ಸಂಸ್ಥೆಯ ಆಡಳಿತ ನಿರ್ದೇಶಕಧರ್ಮೇಂದ್ರ ಮೆಹ್ತಾ ಮತ್ತು ಎಸ್.ಸಿ.ಎಸ್. ಆಸ್ಪತ್ರೆಯ ಆಡಳಿತ ನಿರ್ದೇಶಕಡಾ| ಜೀವ್‌ರಾಜ್ ಆಳ್ವ, ಎ.ಕೆ. ಬನ್ಸಾಲ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕಅಭಿನವ್ ಬನ್ಸಾಲ್, ನಗರದಖ್ಯಾತ ವಕೀಲ ಪದ್ಮರಾಜ್ ಪೂಜಾರಿ, ಎಸ್.ಸಿ.ಡಿ.ಸಿ.ಬ್ಯಾಂಕ್‌ನ ನಿರ್ದೇಶಕರಾದ ಶ್ರೀ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಮುಂಬಯಿ ನಗರದತ್ರಿರಂಗ ಸಂಗಮ ಸಂಸ್ಥೆಯ ಮಾಲಿಕ ಮೋಹನ್‌ರೈ ಉಪಸ್ಥಿತರಿದ್ದು ಪ್ರಸ್ತಾವಿಕವಾಗಿ ಮಾತಾಡಿ ಸಂಸ್ಥೆಗೆ ಯಶಸ್ಸುಕೋರಿದರು. ಉಪಾಧ್ಯಕ್ಷ ಶ್ರೀ ಸನಂದನದಾಸ ವಂದಿಸಿದರು.ಶ್ರೀ ಶ್ವೇತದ್ವೀಪದಾಸಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular