ದಾವಣಗೆರೆ : ಜೀವನೋತ್ಸಾಹ ಚಿರವಾಗಿರಲಿ ಎಂಬ ಸದುದ್ದೇಶದಿಂದ ಆರೋಗ್ಯ, ಪ್ರಕೃತಿ, ಸಂಸ್ಕೃತಿ, ಕೌಶಲ್ಯ, ಮನೋಲ್ಲಾಸ ಹೀಗೆ ವಿವಿಧ ಸಾಮಾಜಿಕ ಕಾಳಜಿಯ “ಅನಂತ ಚೇತನ ಪರಿವಾರ“ ಎಂಬ ಸಂಸ್ಥೆಯು 2024ನೇ ಜುಲೈ 17 ರಂದು ಬುಧವಾರ ಸಂಜೆ 4 ಗಂಟೆಗೆ ನಗರದ ಎಂ.ಸಿ.ಸಿ. `ಬಿ’ ಬ್ಲಾಕ್‌ನ (ಗುಂಡಿ ಛತ್ರದ ಹಿಂಭಾಗ) ಶ್ರೀ ಸದ್ಯೋಜ್ಯಾತ ಶಿವಾಚಾರ್ಯನಿಕೇತನ ಹಿರೇಮಠ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯ ಸಂಚಾಲಕರಾದ ಸುಮ ಸದಾನಂದ ತಿಳಿಸಿದ್ದಾರೆ.
ಈ ನೂತನ ಸಂಸ್ಥೆಯ ಉದ್ಘಾಟನೆಯನ್ನು ಹರಿಹರ ಎಂ.ಕೆ.ಇ.ಟಿ. ಡೀನ್‌ರಾದ ಡಾ. ಬಿ.ಟಿ.ಅಚ್ಯುತ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆಯ ಕಲಾಕುಂಚ ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮಗಣೇಶ್ ಶೆಣೈಯವರು ಆಗಮಿಸಲಿದ್ದಾರೆ. ಅನಂತ ಚೇತನ ಪರಿವಾರದ ಸಂಸ್ಥಾಪಕರಾದ ಡಾ|| ಆರತಿ ಸುಂದರೇಶ್‌ರವರು ಸಮಾರಂಭದ ಅಧ್ಯಕ್ಷತೆಯ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಮಿತಿ ಸದಸ್ಯರಾದ ಹೇಮಾ ರುದ್ರಮುನಿ ತಿಳಿಸಿದ್ದಾರೆ.
ಉದ್ಘಾಟನೆಯ ನಂತರ ಪ್ರೇಕ್ಷಕರ ಮನಸ್ಸನ್ನು ಪುಳಕಿತಗೊಳಿಸಲು ಸಾಮಾನ್ಯಜ್ಞಾನ ಹೆಚ್ಚಿಸಲು, ರಸರಂಜನೆ, ಆಟೋಟ ಸ್ಪರ್ಧೆ, ರಾಮಾಯಣ, ಮಹಾಭಾರತದ ಕುರಿತು ಮೂಲತಾಪ್ರಶ್ನೋತ್ತರ, ವಿಜೇತರಿಗೆ ಬಹುಮಾನ ವಿತರಣೆ ಹಮ್ಮಿಕೊಳ್ಳಲಾಗಿದೆ.
ವಿಶಾಲವಾದ ಸೇವಾ ಮನೋಭಾವನೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಸಮಾನ ಮನಸ್ಕರ ಈ ಸಂಸ್ಥೆಯ ಪದಾಧಿಕಾರಿಗಳು, ಸಮಿತಿ ಸದಸ್ಯರು ವಿನಂತಿಸಿದ್ದಾರೆ.