ಕ್ರೀಡೆ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸುತ್ತದೆ. ಕ್ರೀಡೆ ಮಾನಸಿಕತೆಯ ಮಟ್ಟವನ್ನ ಬೆಳೆಸಿ ಪ್ರೇರಣೆಯನ್ನು ನೀಡುತ್ತದೆ . ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಸ್ಪರ್ಧೆಯಲ್ಲಿ ಆರೋಗ್ಯವಾಗಿ ಸ್ಪರ್ಧಿಸಿ ಬಹುಮಾನವನ್ನು ಗೆಲ್ಲುವಂತೆ ಶುಭನುಡಿಯನ್ನು , ಕ್ರೀಡಾಕೂಟ ಸಾಂಗವಾಗಿ ಜರುಗಲಿ ಎಂದು ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಹೇಳಿದರು .
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಮೈದಾನದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷರು ಅಮೃತ ಭಾರತಿ ಆಡಳಿತ ಮಂಡಳಿ ಶೈಲೇಶ ಕಿಣಿ ಅವರು ಮಾತನಾಡಿದರು.
ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ಭಾರತ ಮಾತೆ , ಸರಸ್ವತಿ, ಓಂಕಾರ ಭಾವಚಿತ್ರಕ್ಕೆ ಸದಸ್ಯರು ಅಮೃತ ಭಾರತಿ ಟ್ರಸ್ಟ್ ಬಾಲಕೃಷ್ಣ ಮಲ್ಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿದರು .
ವಾರ್ಷಿಕ ಕ್ರೀಡಾಕೂಟದ ಪಥಸಂಚಲನೆಯ ಗೌರವ ವಂದನೆಯನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಪುಷ್ಪರಾಜ್ ಜೈನ್ ಸ್ವೀಕರಿಸಿದರು ಮತ್ತು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡೆಗೆ ಚಾಲನೆಯನ್ನು ನೀಡಿದರು .
ವೇದಿಕೆಯಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರು ಅರುಣ್ .ಸಿ.ವೈ. ಅಮೃತ ಭಾರತಿ ಪ್ರಾಥಮಿಕ ವಿಭಾಗದ ಮುಖ್ಯಸ್ಥರು ಅನಿತಾ , ಶಕುಂತಲಾ,ಹೈಸ್ಕೂಲು ವಿಭಾಗದ ಉಪಮುಖ್ಯ ಉಪಾಧ್ಯಾಯರು ಮಹೇಶ್ ಹೈಕಾಡಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ ಶೆಟ್ಟಿ ಉಪಸ್ಥಿತರಿದ್ದರು .
ಸ್ವಾಗತ ಮತ್ತು ನಿರೂಪಣೆ ವಿಮಲಾ ಮಾತಾಜಿ ಮಾಡಿದರು.