ಮುಲ್ಕಿ: ಇಲ್ಲಿಗೆ ಸಮೀಪದ ಹೆಜಮಾಡಿ ಕಾಂಚನ್ ಐಸ್ ಪ್ಲಾಂಟ್ ಬಳಿ ಸಾರ್ವಜನಿಕ ರಸ್ತೆಯ ಅಪಾಯಕಾರಿ ತಿರುವುಗಳಲ್ಲಿ ಅನೇಕ ಅಪಘಾತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೊಲೀಸ್ ಇಲಾಖೆ,ಮುಲ್ಕಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ,ಹೆಜಮಾಡಿ ರೊಲ್ಪಿ ಡಿ ‘ಕೋಸ್ತಾ ಬಳಗದ ವತಿಯಿಂದ ವಾಹನ ಅಪಘಾತವನ್ನು ತಡೆಗಟ್ಟುವ ಉದ್ದೇಶದಿಂದ ಜುಲೈ 23 ರಂದು ಹೆಜಮಾಡಿ ಕಾಂಚನ್ ಐಸ್ ಪ್ಲಾಂಟ್ ಅಳವಡಿಸಲಾದ ಬ್ಲಿಂಕಿಂಗ್ ಲೈಟ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಪಡುಬಿದ್ರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಸನ್ನ ಮಾತನಾಡಿ ಈ ಪ್ರದೇಶದಲ್ಲಿ ಅಪಾಯಕಾರಿ ತಿರುವುಗಳಿದ್ದು ಬ್ಲಿಂಕಿಂಗ್ ಲೈಟ್ ಅಳವಡಿಕೆ ಮೂಲಕ ವಾಹನ ನಿಧಾನ ಗತಿಯ ಚಾಲನೆಗೆ ಎಚ್ಚರಿಕೆ ನೀಡುವ ಸೇವಾ ಸಂಸ್ಥೆಗಳ ಕಾರ್ಯ ಅಭಿನಂದನೀಯವಾಗಿದೆ ಎಂದರು. ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರೊಲ್ಪಿ ಡಿ ‘ಕೋಸ್ತಾ ಮಾತನಾಡಿ ಈ ಭಾಗದಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಮುಂದಿನ ದಿನಗಳಲ್ಲಿ ಅಪಘಾತ ತಡೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಚಿಂತನೆ ನಡೆಸಲಾಗುವುದು ಎಂದರು.
ಈ ಸಂದರ್ಭ ಆಪ್ತ ಬಳಗದ ಸುಧೀರ್ ಕರ್ಕೇರ,ಸನಾ ಇಬ್ರಾಹಿಂ, ಶೇಖಬ್ಬ ಕೋಟೆ, ನಿವೃತ್ತ ಎಲ್ಐಸಿ ಅಧಿಕಾರಿ ರಾಜು, ಶೇಖರ್ ಹೆಜ್ಮಾಡಿ,ರಾಜು, ಶ್ರೀನಿವಾಸ, ಮರಿಯಾ ಡಿ ಕೊಸ್ತಾ, ಮುಲ್ಕಿ ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಸುಜಿತ್ ಸಾಲ್ಯಾನ್, ಶೀತಲ್ ಸುಶೀಲ್,ಉದಯ ಅಮೀನ್,ಸುಶೀಲ್ , ರೋಮ್ಸನ್ ಡಿ ಕೋಸ್ತಾ ಮತ್ತಿತರರು ಉಪಸ್ಥಿತರಿದ್ದರು.