Wednesday, January 15, 2025
Homeರಾಜ್ಯ“ಚನ್ನಪಟ್ಟಣದ ಗೊಂಬೆ” ತಯಾರಿಕೆಯ ಕಾರ್ಯಾಗಾರ ಉದ್ಘಾಟನೆ

“ಚನ್ನಪಟ್ಟಣದ ಗೊಂಬೆ” ತಯಾರಿಕೆಯ ಕಾರ್ಯಾಗಾರ ಉದ್ಘಾಟನೆ

ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುತ್ತಿರುವ ದೇಶೀಯ ಜನಪದ ಕಲೆಗಳ ಸರಣಿಯ ಹದಿನೈದನೆಯ “ಚನ್ನಪಟ್ಟಣದ ಗೊಂಬೆ” ತಯಾರಿಕೆಯ ಕಾರ್ಯಾಗಾರದ ಉದ್ಘಾಟನೆಯನ್ನು ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್‌ನ ಅಸೋಶಿಯೇಟ್ ಪ್ರೊಫೆಸರ್ ಆರ್ಕಿಟೆಕ್ಟ್ ತ್ರಿವಿಕ್ರಮ್ ಭಟ್‌ರವರು ನೆರವೇರಿಸಿದರು. “ಭಾರತೀಯ ಕಲೆಗಳು ಬಹು ಶ್ರೇಷ್ಠವಾದುದು. ಅವುಗಳಲ್ಲೂ ಉಪಯೋಗೀ ಕಲೆಗಳು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿ ನಮ್ಮ ಸೌಂದರ್ಯಪ್ರಜ್ಞೆಯನ್ನು ಬಿಂಬಿಸುವAತವುಗಳು. ಈ ತೆರನಾದ ಚನ್ನಪಟ್ಟಣದಂತಹ ವಿಶೇಷ ಕಲೆ ಪ್ಲಾಸ್ಟಿಕ್ ಆಟಿಕೆಗಳಿಗೆ ಇಂದಿಗೆ ಸಡ್ಡು ಹೊಡೆದು ನಿಂತಿರುವುದು ಮತ್ತು ಈ ಕಾರ್ಯಾಗಾರವು ಉಡುಪಿಯಲ್ಲಿ ಆಯೋಜನೆಗೊಳ್ಳುತ್ತಿರುವುದು ಬಹು ಸಂತಸದ ಸಂಗತಿ” ಎಂಬುದಾಗಿ ಅಭಿಪ್ರಾಯವಿತ್ತರು.
ಗೊಂಬೆ ತಯಾರಿಕಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಸುಕನ್ಯಾ ನೀಲಸಂದ್ರ ಹಾಗೂ ಸುಂದ್ರಕಲಾರವರು ಈ ಕಾರ್ಯಾಗಾರದಲ್ಲಿ ಕಲಿಸಿಕೊಡುತ್ತಿರುವ ಆಟಿಕೆಗಳ ಉಪಯುಕ್ತತೆ ಹಾಗೂ ತಾಂತ್ರಿಕತೆಯನ್ನು ವಿವರಿಸಿದರು. ಟಿಪುö್ಪ ಸುಲ್ತಾನನ ಕಾಲದಲ್ಲಿ ಪರ್ಶಿಯನ್ ಆಟಿಕೆಗಳ ಪ್ರಭಾವದಿಂದ ಚನ್ನಪಟ್ಟಣದಲ್ಲಿ ಬೆಳೆದಿರುವ ಈ ಕಲೆ ಇಂದಿಗೆ ವಿಶ್ವದಾದ್ಯಂತ ಬಹು ಮನ್ನಣೆ ಗಳಿಸುತ್ತಿದೆ. ಹಗುರವಾದ ಮರದಿಂದ ನೈಸರ್ಗಿಕ ವರ್ಣದಲ್ಲಿ ತಯಾರಿಸಲಾಗುವ ಈ ಕಲೆ ಮಕ್ಕಳ ಆಟಿಕೆಗಳಲ್ಲಿ ಬಹು ಉಪಯುಕ್ತವಾಗಿದೆ. ಗೃಹ ಉದ್ಯಮದಲ್ಲಿ ಸಣ್ಣ ಕರಕುಶಲ ವಸ್ತುಗಳು ಮಾರಾಟದಿಂದ ಹೇಗೆ ಇಂದಿಗೆ ಬೆಳೆದು ಸದೃಢವಾಗಿ ನಾವು ನಿಂತಿದ್ದೇವೆ ಎಂಬುದಾಗಿ ವಿವರಿಸಿದರು.
ದೇಶೀಯ ಕಲೆಗಳ ಈ ಕಾರ್ಯಾಗಾರದ ಆಯೋಜನೆಯ ಸದುದ್ದೇಶವೇ ಕರಾವಳಿಯ ಕಲಾಸಕ್ತರು ದೇಶೀಯ ಕಲೆಗಳ ಬಗೆಗೆ ಅರಿವು ಹೊಂದಿ, ಅದರ ಹಿಂದಿನ ಇತಿಹಾಸ, ಶ್ರಮ, ತಾಂತ್ರಿಕತೆಯನ್ನು ತಿಳಿದುಕೊಳ್ಳ ಬೇಕೆಂಬುದಾಗಿದೆ. ಮಾತ್ರವಲ್ಲದೇ ಬಹು ಉಪಯುಕ್ತತೆಯಿಂದ ಕೂಡಿದ ನಮ್ಮ ನಾಡಿನ ಕಲೆಗಳು ಉಳಿದು – ಬೆಳೆಯಬೇಕಾದಲ್ಲಿ ಈ ಕಾರ್ಯಾಗಾರಗಳು ಹೇಗೆ ಸಹಕಾರವಾಗಬಲ್ಲುದು ಎಂಬುದಾಗಿ ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ವಿವರಿಸಿದರು. ಪೌಂಡೇಶನ್‌ನ ಅಧ್ಯಕ್ಷರಾದ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು.
ಹೊಸ ವರ್ಷವನ್ನು ಒಂದು ದೇಶೀಯ ಕಲೆಯ ಕಲಿಯುವಿಕೆಯ ಮೂಲಕ ಆರಂಭಿಸಬೇಕೆAಬ ಚಿಂತನೆ ಹೊತ್ತ ಈ ಕಾರ್ಯಾಗಾರವನ್ನು ಮಣಿಪಾಲ ವಿಶ್ವವಿದ್ಯಾಲಯ ಹಾಗೂ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ರಿಸಿಡೆನ್ಸಿಯಲ್ ಸ್ಕೂಲ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಚನ್ನಪಟ್ಟಣದ ಗೊಂಬೆಗಳ ವಿವಿಧ ನಮೂನೆಗಳನ್ನು ಕಲಿಸಿಕೊಡಲಾಗುತ್ತಿರುವ ಈ ಕಾರ್ಯಾಗಾರವು ಸೋಮವಾರದ ತನಕ ಬಡಗುಪೇಟೆಯಲ್ಲಿ ಆಯೋಜನೆಗೊಳ್ಳುತ್ತಿದೆ.

RELATED ARTICLES
- Advertisment -
Google search engine

Most Popular