ಮೂಡುಬಿದಿರೆಯಲ್ಲಿ ನೂತನ ಅಸ್ತಿತ್ವ ಪಡೆದುಕೊಂಡ ಮೂಡುಬಿದಿರೆ ತಾಲ್ಲೂಕು ಕೆಮಿಸ್ಟ್ಸ್ ಅಸೋಸಿಯೇಷನ್ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನ. 2೦ ರಂದು ಗೌರವಾಧ್ಯಕ್ಷರಾದ ಕೇಶವಭಟ್ ಅವರು ದೀಪ ಬೆಳಗಿಸಿ ಉದ್ಘಾಟನೆಗೈದರು. ಗೌರವಾಧ್ಯಕ್ಷರಾದ ಅಶೋಕ್ ಅಧಿಕಾರಿ ಲಾಂಛನ ಬಿಡುಗಡೆ ಮಾಡಿದರು. ವೇದಿಕೆಯ ಅಧುಕ್ಷತೆಯನ್ನು ಸಿ. ಎಚ್ ಗಪೂತ್ ವಹಿಸಿದ್ದರು. ಉಪಾಧ್ಯಾಕ್ಷರಾಗಿ ಸೂರಜ್ ಪೈ, ಬಾಲಕೃಷ್ಣ ಭಟ್,ಕಾರ್ಯದರ್ಶಿಯಾಗಿ ನವೀನ್ ಟಿಆರ್, ಜೊತೆ ಕಾರ್ಯದಶಿಯಾಗಿ ರಾಮಾನಾಥ ಪ್ರಭು, ಖಚಾಂಜಿಯಾಗಿ ರಾಮದಾಸ್ ಪೈ ಉಪಸ್ಥಿತರಿದ್ದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು. ರಾಮದಾಸ್ ಪೈ ವಂದಿಸಿದರು.