Thursday, March 20, 2025
Homeಕಟೀಲುವಾಯ್ಸ್ ಆಪ್ ಆರಾಧನ ತಂಡದ ಮಕ್ಕಳ ಭಜನಾ ಕಾರ್ಯಕ್ರಮದ ಉದ್ಗಾಟನೆ

ವಾಯ್ಸ್ ಆಪ್ ಆರಾಧನ ತಂಡದ ಮಕ್ಕಳ ಭಜನಾ ಕಾರ್ಯಕ್ರಮದ ಉದ್ಗಾಟನೆ

ಗೋಪಾಲಕೃಷ್ಣ ಅಸ್ರಣ್ಣ ಸಭಾಂಗಣ ಕಟೀಲಿನಲ್ಲಿ ಫೆಭ್ರವರಿ 7 ರಂದು ಅದ್ದೂರಿ ಆಗಿ ನಡೆಯಿತು ಭಜನೆಯ ಉದ್ಗಾಟನೆಯನ್ನು ಲಕ್ಷೀನಾರಾಯಣ ಅಸ್ರಣ್ಣ ಅನುವಂಶಿಕ ಅರ್ಚಕರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ನೆರವೇರಿಸಿ ಭಜನೆಯ ಮಹತ್ವ ತಿಳಿಸಿದರು ಅಧ್ಯಕ್ಷತೆ ನೆಲೆಯಲ್ಲಿ ಅಗರಿ ಎಂಟರ್ಪ್ರೈಸಸ್ ನ ಅಗರಿ ರಾಘವೇಂದ್ರ ರಾವ್ ಅವರು ಪ್ರತಿ ಮನೆಯಲ್ಲಿ ಭಜನೆ ಆರಂಭ ಆದರೆ ಮಾತ್ರ ಸಂಸ್ಕ್ರತಿ ಉಳಿಯಲು ಸಾಧ್ಯ ಮಕ್ಕಳಿಂದಲೇ ಭಜನೆ ಉಳಿಸ ಬೇಕು ಎಂದರು.

ಯುಗಪುರುಷ ಭುವನಾಭಿ ಉಡುಪ ಕಿನ್ನಿಗೋಳಿ ಮಾತಾನಾಡಿ ಭಜನೆ ಯ ಭಜಕರಿಗೆ ಶುಭ ಹಾರೈಸಿದರು. ಪುನರೂರು ಪ್ರತಿಷ್ಟಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಅವರು ಭಜನೆಯ ಭಕ್ತಿ ಮಾರ್ಗ ಈಗಿನ ಮಕ್ಕಳಿಗೆ ಅಗತ್ಯ ಇಂದು ಅಸ್ರಣ್ಣರ ಹಸ್ತದಿಂದ ಉದ್ಗಾಟನೆ ಆಗಿದೆ ಅಂದ್ರೆ ಯಶಸ್ಸು ಖಂಡಿತ ಸಿಗಲಿದೆ ಪ್ರತಿ ಮನೆಯಿಂದ ಭಜನೆ ಪ್ರಾರಂಭ ವಾಗ ಬೇಕು ಎಂದರು ಸಂಗೀತ ವಿದ್ವಾ‌ನ್ ಡಾ.ಸೋಮಶೇಖರ ಮಯ್ಯ ಮಾತಾಡಿ ಸಂಗೀತದಿಂದ ಭಜನೆ ಸಾಧ್ಯ ಎಂದರು ಡಾ.ಮಂದಾರ ರಾಜೇಶ್ ಭಟ್ ವಾಯ್ಸ್ ಆಪ್ ಆರಾಧನ ಬೆಳೆದು ಬಂದ ದಾರಿ ಕರ್ನಾಟಕದಾದ್ಯಂತ ಪ್ರತಿಭೆಗಳು ತಂಡದಲ್ಲಿ ಇರುವುದು ಹೆಮ್ಮೆ ಭಜನೆ ಮನೆ ಮನೆ ತಲುಪ ಬೇಕು ಎಂದರು.

ಈ ಸಂದರ್ಭ ದಲ್ಲಿ ವಾಯ್ಸ್ ಆಪ್ ಆರಾಧನ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಉದ್ಯಮಿ ಅರುಣ್ ಅಜೆಕಾರು ಭಜನಾ ಗುರುಗಳಾದ ಮಲ್ಲಿಕಾ ಸುಖೇಶ್ .ಸದಸ್ಯರಾದ ದೀನ್ ರಾಜ್ ಕೆ ಬಸವರಾಜ ಮಂತ್ರಿ ಸತೀಶ್ ಅಬ್ಬನಡ್ಕ ಕೀರ್ತನ್ ಪೂಜಾರಿ ಶ್ರೀಕಾಂತ ಭಟ್ ಪೊನ್ನಗಿರಿ ಭಾಸ್ಕರ ದೇವಾಡಿಗ ಹಾಗು ವಾಯ್ಸ್ ಆಪ್ ಆರಾಧನ ಭಜಕರು ಪೋಷಕರು ಉಪಸ್ಥಿತರಿದ್ದರು ಶಿವಮನ್ಯು ಪೊನ್ನಗಿರಿ ಅವರು ಪ್ರಾಥನೆ ಗೈದರು ಅಭಿಷೇಕ್ ಶೆಟ್ಟಿ ಐಕಳ ಧನ್ಯವಾದ ವಿತ್ತರು ರೂಪ ಪ್ರದೀಪ್ ಮೂಡುಬಿದಿರೆ ಅವರು ನಿರೂಪಣೆ ಗೈದರು.

RELATED ARTICLES
- Advertisment -
Google search engine

Most Popular