ಉಡುಪಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಗ್ರಿ ನೋಳೇ ಶಾಲೆಯಲ್ಲಿ ರೋಟರ್ಯಾಕ್ಟ್ ಕ್ಲಬ್ ಉಡುಪಿ ವತಿಯಿಂದ ಆರೋಗ್ಯ ಹಾಗೂ ಸ್ವಚ್ಛತಾ ಅರಿವು ಅಭಿಯಾನವನ್ನು ಉದ್ಘಾಟಿಸಲಾಯಿತು.
ಉಡುಪಿಯಲ್ಲಿ ಮುಂಚೂಣಿಯಲ್ಲಿರುವ ಒಂದು ಯುವಕ – ಸಾಮಾಜಿಕ ಸಂಘಟನೆಯಾದ ರೋಟರ್ಯಾಕ್ಟ್ ಕ್ಲಬ್ ಉಡುಪಿ ಯ ಸದಸ್ಯರು, ಶಾಲಾ ಮಕ್ಕಳಲ್ಲಿ ಆರೋಗ್ಯ ಹಾಗು ಸ್ವಚ್ಛತೆಯ ಅರಿವನ್ನು ಹೆಚ್ಚಿಸುವ ಸಲುವಾಗಿ ಹಲವಾರು ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆಶಯವಿಟ್ಟುಕೊಂಡು, ಇಂದು ಸಗ್ರಿ ಶಾಲೆಯಲ್ಲಿ ಮೊದಲ ಕಾರ್ಯಕ್ರಮ ಹಾಗು ಉದ್ಘಾಟನಾ ಸಮಾರಂಭ ವನ್ನು ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ. ರಾಜಲಕ್ಷ್ಮಿ ಅವರು ದೀಪ ಬೆಳಗಿಸಿ ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಅವಧಿಯನ್ನುತೆಗೆದುಕೊಳ್ಳುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಆದ ಶ್ರೀಮತಿ ಕುಸುಮ ಅವರು ಹಾಗು ರೋಟರಿ ಉಡುಪಿಯ ರೋಟಾರ್ಯಾಕ್ಟ್ ಸಭಾಪತಿ ರೋ. ಬಿ ಕೆ ನಾರಾಯಣ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರೋಟಾರ್ಯಾಕ್ಟ್ ಉಡುಪಿಯ ಅಧ್ಯಕ್ಷರಾದ ಅಂಶ್ ಕೋಟ್ಯಾನ್ ಸ್ವಾಗತಿಸಿದರು. ರೋಟಾರ್ಯಾಕ್ಟ್ ಕ್ಲಬ್ ಉಡುಪಿಯ ಸಲಹೆಗಾರರಾದ ಶ್ರೀಹರಿ ಕೆರೆಕೊಡಿಗೆ ಹಾಗು ಸಾಮಾಜಿಕ ಕಾರ್ಯಗಳ ನಿರ್ದೇಶಕಿಯಾದ ಅಪೂರ್ವ ಬೈಕಾಡಿ ಇವರು ಕಾರ್ಯಕ್ರಮ ನಿರೂಸಿದರು. ಕಾರ್ಯಕ್ರಮದಲ್ಲಿ ರೊಟರಯಾಕ್ಟ್ ಸದಸ್ಯರಾದ ಅರ್ಜುನ್ ರಾವ್, ಮಧುರ ಮೂರ್ತಿ, ಹಾಗು ಇತರ ರೊಟರಾಕ್ಟ್ ಸದಸ್ಯರು ಹಾಗೂ ಶಾಲಾ ಸಿಬ್ಬಂಧಿವರ್ಗದವರೂ ಉಪಸ್ಥಿತರಿದ್ದರು.